ಮೆಜೆಸ್ಟಿಕ್, ಡಾನ್ ನಿರ್ದೇಶಕ ಸತ್ಯ ಈಗ ಪಾಗಲ್

Pooja Gandhi
ಮೆಜೆಸ್ಟಿಕ್, ಡಾನ್, ಗೂಳಿ, ದಾಸ, ಶಾಸ್ತ್ರಿ, ಹೀಗೆ ಸಾಲು ಸಾಲು ಮಾಸ್ ಚಿತ್ರಗಳ ನಿರ್ದೇಶಕ 'ಪಿ. ಎನ್. ಸತ್ಯ' ಇದೀಗ ಪಾಗಲ್ ಆಗಿದ್ದಾರೆ. ಅವರಿಗೆ ಸಿನಿಮಾ ಸಿಗದೇ ಹುಚ್ಚು ಹಿಡಿದಿದೆ ಅಂದುಕೊಳ್ಳಬೇಡಿ. ಚೆನ್ನಾಗಿಯೇ ಇದ್ದಾರೆ ಸತ್ಯ. ಅಷ್ಟಕ್ಕೂ ಅವರಿಗೆ ಚಿತ್ರ ಸಿಗುತ್ತಿಲ್ಲ ಎಂದವರಾರು? ಈಗ ಅವರೇ ನಾಯಕರಾಗಿ, ನಿರ್ದೇಶಕರೂ ಆಗಿರುವ ಚಿತ್ರ 'ಪಾಗಲ್' ಮುಂದಿನ ತಿಂಗಳು ತೆರೆಗೆ ಬರುತ್ತಿದೆ.

ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ರನ್ನು ಮೊಟ್ಟಮೊದಲ ಬಾರಿಗೆ ನಾಯಕರನ್ನಾಗಿಸಿ ಆ ಚಿತ್ರವನ್ನು ನಿರ್ದೇಶಿಸಿದವರೇ ಈ ಸತ್ಯಾ. ಕಂಪ್ಲೀಟ್ ಮಾಸ್ ಚಿತ್ರವಾಗಿದ್ದ ಮೆಜೆಸ್ಟಿಕ್, ದರ್ಶನ್ ಗೆ 'ಚಾಲೇಂಜಿಂಗ್ ಸ್ಟಾರ್' ಹಾಗೂ ಸತ್ಯಾರಿಗೆ 'ಮಾಸ್ ಡೈರೆಕ್ಟರ್' ಎಂಬ ಇಮೇಜ್ ಸೃಷ್ಟಿಸಿ ಸ್ಯಾಂಡಲ್ ವುಡ್ ಪ್ರಯಾಣಕ್ಕೆ ನಾಂದಿ ಹಾಡಿತು. ನಂತರ ಹೆಚ್ಚು ದರ್ಶನ್ ಚಿತ್ರಗಳನ್ನೇ ಮಾಡಿದ್ದ ಸತ್ಯಾ ಸುದೀಪ್ ನಾಯಕತ್ವದ 'ಗೂಳಿ' ಕೂಡ ನಿರ್ದೇಶಿಸಿದ್ದರು.

ಇದೀಗ ಸತ್ಯಾ, ತಾವೇ ನಟಿಸಿ, ನಿರ್ದೇಶಿಸಿರುವ 'ಪಾಗಲ್' ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರಲಿದ್ದಾರೆ. ಇದಕ್ಕೆ ಪೂಜಾ ಗಾಂಧಿ ನಾಯಕಿ. ಸಾಕಷ್ಟು ನಿರೀಕ್ಷೆಯನ್ನಂತೂ ಹುಟ್ಟಿಸಿರುವ ಈ ಚಿತ್ರ, ಜನರಿಗಿಂತಲೂ ಹೆಚ್ಚು ನಿರೀಕ್ಷೆಯನ್ನು ಸ್ವತಃ ಸತ್ಯಾರಲ್ಲಿ ಹುಟ್ಟುಹಾಕಿದೆ. ಕಾರಣ, ಈಗ ಸತ್ಯ ಕಾಲ ಚಲಾವಣೆಯಲ್ಲಿಲ್ಲ. ದರ್ಶನ್, ಸುದೀಪ್ ಕೈಗೇ ಸಿಗದಷ್ಟು ಮೇಲೇರಿದ್ದಾರೆ. ಸತ್ಯರನ್ನು ಪಾಗಲ್ ಕಾಪಾಡಲಿದೆ ಎಂಬ ನಂಬಿಕೆ ಎಲ್ಲರಿಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada Mas Director P N Satya is set to appear as hero on the silver screen while 'Mungaaru Maley' fame Pooja Gandhi is paired with him. The film’s title is Paagal.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X