»   »  ಹುಟ್ಟೂರಿನ ಜನರ ಅಳಲು, ಭಟ್ಟರ ಗೋಳು

ಹುಟ್ಟೂರಿನ ಜನರ ಅಳಲು, ಭಟ್ಟರ ಗೋಳು

Posted By:
Subscribe to Filmibeat Kannada

ನಾನು ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ತಿಳವಳ್ಳಿ ಗ್ರಾಮದವನು. ನನ್ನ ಊರಿನ ಜನ ನಾನೊಬ್ಬ ಅತಿದೊಡ್ಡ ನಿರ್ಮಾಪಕನೆಂದು ನಂಬಿದ್ದಾರೆ. ಅಲ್ಲಿನ ಜನರಿಗೆ ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಮುಂಗಾರು ಮಳೆ ಮತ್ತು ಗಾಳಿಪಟ ಚಿತ್ರ ಯಶಸ್ಸು ಗಳಿಸಿದ ನಂತರ ನನ್ನ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿಪಾಸ್ತಿಯಿದೆ ಎಂದು ತಿಳಿದಿದ್ದಾರೆ. ಆದರೆ ವಸ್ತುಸ್ಥಿತಿಯೇ ಬೇರೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಮ್ಮ ಗ್ರಾಮಸ್ಥರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

'ಬೆಂಗಳೂರು ಮಿರರ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಯೋಗರಾಜ್ ಭಟ್, ಅವರ ಬಳಿ ಅಷ್ಟೊಂದು ಆಸ್ತಿಪಾಸ್ತಿಗಳಿದ್ದರೂ ತಾನು ಹುಟ್ಟಿದ ಹಳ್ಳಿಗೆ ಒಂದು ದೇವಾಲಯವಾಗಲಿ ಅಥವಾ ಶಾಲೆಯೊಂದನ್ನು ಕಟ್ಟಿಸಲಿಲ್ಲ ಎನ್ನುವ ಅಪವಾದ ನನ್ನ ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಇಲ್ಲಿ ಬೆಂಗಳೂರಿನಲ್ಲಿ ಇಂದಿಗೂ ಭಿಕಾರಿ ತರಹ ಬದುಕುತ್ತಿದ್ದೇನೆ.

ನಾನು ಕನ್ನಡ ಚಿತ್ರವನ್ನು ತೆಗೆಯಬೇಕಾದರೆ ನನ್ನದೇ ಆಗಿರುವ ಕೆಲವೊಂದು ಸಿದ್ದಾ೦ತಗಳಿವೆ. ತಮಿಳು ಮತ್ತು ತೆಲುಗು ಚಿತ್ರರಂಗದ ಹಾಗೆ ನಮ್ಮ ಚಿತ್ರರಂಗವಿಲ್ಲ. ಅಲ್ಲಿ ಮುಖ್ಯವಾಗಿ ಮಧ್ಯಮ ಮತ್ತು ಕೆಳ ವರ್ಗದವರನ್ನು ನಂಬಿ ಚಿತ್ರ ತೆಗೆಯುತ್ತಾರೆ. ಕಲೆ ಮತ್ತು ಸಾಹಿತ್ಯಗಳ ಬಗ್ಗೆ ಚಿತ್ರದಿ೦ದ ನೋಡಿ ಕಲಿಯುತ್ತಾರೆ. ಆದರೆ, ಕನ್ನಡ ಚಿತ್ರರಂಗ ಇದಕ್ಕೆ ವಿರುದ್ದ, ನನ್ನ ನಿರ್ದೇಶನದ ದಿಗಂತ್ ಮತ್ತು ಅಂದ್ರಿತಾ ರೇ ಅಭಿನಯದ 'ಮನಸಾರೆ' ಚಿತ್ರದ ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಚಿತ್ರಕ್ಕೆ ಉತ್ತಮ ಲೊಕೇಶನ್ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಯೋಗರಾಜ್ ಭಟ್ ಸಂದರ್ಶನದಲ್ಲಿ ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada