ಡೈರೆಕ್ಟರ್ ಗುರು ಪ್ರಸಾದ್ 'ಸ್ಪೆಷಲ್' ಮುಹೂರ್ತ ಫಿಕ್ಸ್

By Rajendra

'ಮಠ' ಖ್ಯಾತಿಯ ಗುರುಪ್ರಸಾದ್ ಅಜ್ಞಾತವಾಸದಿಂದ ಎದ್ದು ಬಂದಿದ್ದಾರೆ. ಇದೀಗ ಅವರ ಕೈಯಲ್ಲಿ 'ಡೈರೆಕ್ಟರ್ಸ್ ಸ್ಪೆಷಲ್' ಇದೆ. 'ಎದ್ದೇಳು ಮಂಜುನಾಥ' ಚಿತ್ರಕ್ಕೆ ಐಡಿಯಾ ಫಿಲಂಫೇರ್ ಪ್ರಶಸ್ತಿ ವರಿಸಿದ್ದು ಅವರ ಹುಮ್ಮಸ್ಸನ್ನು ಇಮ್ಮಡಿಸಿದೆ.

ಈಗ ನೇರವಾಗಿ ವಿಷಯಕ್ಕೆ ಬರೋಣ, ಗುರು ನಿರ್ದೇಶಿಸಲಿರುವ ಮಹತ್ವಾಕಾಂಕ್ಷಿ ಚಿತ್ರ 'ಡೈರೆಕ್ಟರ್ಸ್ ಸ್ಪೆಷಲ್" ಆಗಸ್ಟ್ 27ಕ್ಕೆ ಸೆಟ್ಟೇರಲಿದೆ. ಈ ಚಿತ್ರವನ್ನು ಎಂ ಗೋವಿಂದು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು ವಿಷ್ಣುವರ್ಧನ್ ಅವರ 'ವಿಷ್ಣುಸೇನೆ' ಚಿತ್ರವನ್ನು ನಿರ್ಮಿಸಿದ್ದರು.

ಈ ಚಿತ್ರಕ್ಕೆ ಕೋಮಲ್ ನಾಯಕ ನಟ ಎಂದು ಈ ಹಿಂದೆ ಗುರು ಪ್ರಸಾದ್ ತಿಳಿಸಿದ್ದ್ದರು. ಆದರೆ ಕಾರಣಾಂತರಗಳಿಂದ ಕೋಮಲ್ ಚಿತ್ರದಿಂದ ಹೊರ ಬಂದದ್ದು ಹಳೆಯ ಸಂಗತಿ. ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿರುವ ಗುರು ಈ ಬಾರಿ ಹೊಸ ಪ್ರತಿಭೆಗಳೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಶೀಘ್ರದಲ್ಲೆ ಎಲ್ಲ ವಿವರಗಳನ್ನು ತಿಳಿಸುವುದಾಗಿ ಗುರು ಪ್ರಸಾದ್ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X