For Quick Alerts
  ALLOW NOTIFICATIONS  
  For Daily Alerts

  ಆಕ್ಟರ್ಸ್ Vs ಫೈಟರ್ ಗೆ ವರುಣನೇ ಅಂಪೈರ್

  By Mahesh
  |

  ಡಾ.ರಾಜ್ ಕಪ್ ಆರಂಭ ಆಟದ ಟಾಸ್ ಹಾಕುವ ಮುನ್ನವೇ , ಆಟಗಾರರು ಪ್ಯಾಡ್ ಕಟ್ಟುವ ಮುನ್ನವೇ ಕಲಾವಿದರುಗಳು ತೊಡೆತಟ್ಟಿ ಒಂದಿಷ್ಟು ಬಂಡಾಯ ರಾಗ ಹಾಡಿದ್ದು ಈಗ ಹಳೆ ಕಥೆ.

  ಈ ಅಪಸ್ವರ ಮುಗಿಲು ಮುಟ್ಟುವ ಮುನ್ನವೇ ತಣ್ಣಗಾಗಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎನ್ನುವಷ್ಟರಲ್ಲೇ ವರುಣ ದೇವ ಅಡ್ಡಲಾಗಿ ನಿಲ್ಲುವ ಎಲ್ಲ ಸೂಚನೆಗಳು ಕಂಡು ಬಂದಿದೆ.

  ಹೌದು, ಇಂದಿನಿಂದ ದಾವಣಗೆರೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರ 'ಡಾ. ರಾಜ್ ಕಪ್' ಟ್ವೆಂಟಿ-20 ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಸುದೀಪ್ ಹಾಗೂ ಥ್ರಿಲ್ಲರ್ ಮಂಜು, ದುನಿಯಾ ವಿಜಯ್ ತಂಡಗಳು ಸೆಣಸಲಿವೆ. ಆದರೆ, ಮಳೆರಾಯನಿಗೆ ಹೆದರಿಕೊಂಡೇ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ.

  ಅಭ್ಯಾಸ ಪಂದ್ಯಕ್ಕೆ ತಪ್ಪದೆ ಬರುತ್ತಿದ್ದದುನಿಯಾ ವಿಜಯ್ ಮೈದಾನಕ್ಕೆ ಇಳಿಯುವುದು ಗ್ಯಾರಂಟಿ ಎನ್ನಲಾಗಿದೆ. ಯುವಕಲಾವಿದರಾದ ಯಶ್, ಚಿರಂಜೀವಿ ಸರ್ಜಾ, ಚೇತನ್,ಲೂಸ್ ಮಾದ ಯೋಗೇಶ್ ಮಾತ್ರ ಬ್ಯಾಟ್ ಬೀಸಿ ಸಿಕ್ಸರ್ ಎತ್ತಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರಿ ತಯಾರಿ ನಡೆಸುತ್ತಿದ್ದಾರೆ.

  ಪಂದ್ಯಗಳ ವೀಕ್ಷಣೆಗೆ ಟಿಕೆಟ್ ನಿಗದಿಪಡೆಸಿದ್ದು, ಇದರಿಂದ ಬರುವ ಎಲ್ಲಾ ಹಣ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹೋಗಲಿದೆ. ಇಂದಿನ ಎರಡನೇ ಪಂದ್ಯದಲ್ಲಿ ಸಚಿವ ಶ್ರೀರಾಮುಲು ಮುಂದಾಳತ್ವದ ಶಾಸಕರ ತಂಡ ದಿಂಗಂತ್ ಮತ್ತು ಯೋಗಿ ನೇತೃತ್ವದ ತಂಡವನ್ನು ಎದುರಿಸಲಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X