ವಿಜಯ್ 'ಜರಾಸಂಧ' ಹಾಡುಗಳು ಜಂಗ್ಲಿಗಿಂತಲೂ ಹಿಟ್

ದುನಿಯಾ ವಿಜಯ್ ಕೆರಿಯರ್ ನಲ್ಲೇ ಯಾವ ಚಿತ್ರದ ಹಾಡುಗಳೂ ಈ ಮಟ್ಟಕ್ಕೆ ಕ್ಲಿಕ್ ಆಗಿರಲಿಲ್ಲ. ಜಂಗ್ಲಿಯನ್ನೂ ಮೀರಿ ಸೌಂಡ್ ಮಾಡಿದೆ ಈ ಜರಾಸಂಧ ಹಾಡುಗಳು. ಶಶಾಂಕ್ ಸಖತ್ ಖುಷಿಯಾಗಿದ್ದಾರೆ. ಬಿಡುಗಡೆಯಾದ ಮೇಲೆ ಜಂಗ್ಲಿ ಹಾಡುಗಳು ಕ್ಲಿಕ್ ಆಗಿದ್ದವು. ಆದರೆ ಜರಾಸಂಧ ಬಿಡುಗಡೆಗೂ ಮುನ್ನವೇ ಸೂಪರ್ ಹಿಟ್.

ಆದರೆ ಹಾಡು 'ಹಿಟ್' ಆಗುವುದಕ್ಕೂ ಚಿತ್ರ 'ಹಿಟ್' ಆಗುವುದಕ್ಕೂ ಪರಸ್ಪರ ಸಂಬಂಧವಿಲ್ಲ ಅನ್ನುವುದಕ್ಕೆ ಸಾಕ್ಷಿ 'ಪರಮಾತ್ಮ'. ದಕ್ಷಿಣ ಭಾರತದಲ್ಲೇ ಹಾಡುಗಳು 'ಟಾಪ್ ಒನ್' ಸ್ಥಾನ ಗಿಟ್ಟಿಸಿದ್ದರೂ ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ. ಹಾಡುಗಳು ಹಿಟ್ ಆಗದಿದ್ದರೂ 'ಸಾರಥಿ' ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲೆ ನಿರ್ಮಿಸಲಿಲ್ಲವೇ?

ಏನೇ ಆದರೂ ಒಬ್ಬ ನಿರ್ದೇಶಕನಿಗೆ ಹಾಡುಗಳು ಹಿಟ್ ಅನ್ನಿಸಿದಾಗ ಸಿನಿಮಾ ಬಗ್ಗೆಯೂ ನಿರೀಕ್ಷೆ ಮೂಡುವುದು ಸಹಜ. ಹಾಗಾಗಿಯೇ ಶಶಾಂಕ್ ಮತ್ತು ವಿಜಿ ಇಬ್ಬರಿಗೂ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ. ಈ ಚಿತ್ರದ 'ಪದೇಪದೇ ಪೋನಿನಲ್ಲಿ...' ಎನ್ನುವ ಹಾಡನ್ನು ಬ್ಯಾಂಕಾಕ್ ನಲ್ಲಿ ಶೂಟ್ ಮಾಡಲಾಗಿದೆ. ಸೂಪರ್ ಸ್ಟಾರ್ 'ಉಪ್ಪಿ' ಹಾಡಿರುವ ಹಾಡೊಂದಿದೆ. ಇನ್ನೇನು ಸದ್ಯದಲ್ಲೇ ತೆರೆಗೆ ಬರಲಿದೆ (ಒನ್ ಇಂಡಿಯಾ ಕನ್ನಡ)

More from Filmibeat

English summary
Jarasandha movie has lot of expectation by its songs. Songs became more hit than any other songs of diniya vijay movie. Shashank direction is for this. Duniya Vijay and Praneetha pair. 
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X