twitter
For Quick Alerts
ALLOW NOTIFICATIONS
For Daily Alerts

ಶೈಲಜಾರನ್ನು ಬುಟ್ಟಿಗೆ ಹಾಕಿಕೊಂಡ ದ್ವಾರಕೀಶ್

By Rajendra

Next »

« Previous

Actor Dwarakish
"ಅದೊಂದು ದೊಡ್ಡ ಕಥೆ. ಯಾವ ಸಿನಿಮಾ ಸ್ಕ್ರಿಪ್ಟ್‌ಗೂ ಕಮ್ಮಿಯಿಲ್ಲದಂಥಾ ಕಥೆ. ಬೋರಾಗದಿದ್ದರೆ ಹೇಳುತ್ತೇನೆ ಕೇಳಿ: ಶೈಲಜಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಲ್ಲಿ ನೌಕರಿಯಲ್ಲಿದ್ದಾಕೆ. ತನ್ನ ಅಕ್ಕನ ಮಗಳನ್ನು ಸಿನಿಮಾಕ್ಕೆ ಸೇರಿಸಲೆಂದು ಆಕೆ ಆಗಾಗ ನನ್ನನ್ನು ಮೀಟ್ ಮಾಡುತ್ತಿದ್ದಳು. ಆದ್ರೆಆಕೆಯ ಅಕ್ಕನ ಮಗಳಿಗಿಂತಲೂ ಈಕೆಯೇ ನನ್ಗೆ ಇಷ್ಟವಾದಳು. ಬೆಳ್ಳಗಿದ್ದಳು. ತುಂಬು ಸೌಂದರ್ಯ. ನಾನು ಕ್ಲೀನ್ ಬೌಲ್ಡ್. ಆಕೆಯ ಅಕ್ಕನ ಮಗಳಿಗೆ ಅವಕಾಶ ಮಾಡಿಕೊಡಲಿಲ್ಲ ನಿಜ, ಆದರೆ ಶೈಲಜಾಳನ್ನು ಬುಟ್ಟಿಗೆ ಹಾಕಿಕೊಂಡೆ."

ತಡ ಮಾಡದೇ ಪ್ರೊಪೋಸ್ ಮಾಡಿದೆ. ಒಪ್ಪಿಕೊಂಡಳು. ಭಯ ಶುರುವಾದದ್ದೇ ಆವಾಗ್ಲಿಂದ. ಎರಡನೇ ಮದುವೆ ವಿಚಾರವನ್ನು ಅಂಬುಜಾಗೆ ತಿಳಿಸುವುದು ಹೇಗೆ? ವರ್ಷ ಕಳೆಯಿತು. ಮದುವೆಯಾಗಿರುವ ಐವರು ಮಕ್ಕಳ ಮುದಿ ತಂದೆ ಎರಡನೇ ಮದುವೆಯಾಗುತ್ತಾನೆಂದರೆ ಜನ ನಕ್ಕಾರು ಎನ್ನುವ ಕಲ್ಪನೆಯೇ ಹೇಸಿಗೆ ತರಿಸಿತು. ಬೇರೆ ದಾರಿಯಿರಲಿಲ್ಲ.

ನಿಜ ಹೇಳಬೇಕೆಂದರೆ ಅಂಬುಜಾಳನ್ನು ಬಿಟ್ಟಿರುವುದು ಸಾಧ್ಯವೇ ಇರಲಿಲ್ಲ. ಅಂತೆಯೇ ಶೈಲಜಾಳನ್ನು ಕೂಡಾ ಬಿಟ್ಟಿರಲಾಗದಂಥಾ ಪರಿಸ್ಥಿತಿ. ಕೊನೆಗೂ ಹೆಂಡತಿ ಮಕ್ಕಳ ಪರ್ಮಿಷನ್ ಪಡೆದೇ ಎರಡನೇ ಮದುವೆಯಾಗುವುದೆಂದು ನಿರ್ಧರಿಸಿದೆ.

Next »

« Previous

English summary
Kannada actor Dwarakish second marriage, love episode, personal life etc by Ganesh Kasaragodu's book Off The Record. The book throws light on another side of actors life. Bungle Shama Rao Dwarakanath, better known as Dwarakish or Dwarakesh (born 19 August 1942), is an actor, director and producer in the Kannada films.
Tuesday, August 23, 2011, 13:33
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X