ಸಿನಿಮಾ ಬಗ್ಗೆ ಹುಚ್ಚಿದ್ದರೆ ದೇಸಿ ಕಾಲೇಜಿಗೆ ಬನ್ನಿ

By Mahesh

ಟೈಟಲ್ ನೋಡಿ ಗಾಬರಿಯಾಗಬೇಡಿ, ಕನ್ನಡ ಸಿನಿಮಾ ಹಾಗೂ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಿ ಹೊಸತನ ಪ್ರಯೋಗ ಮಾಡಬಯಸುವವರಿಗೆ ಒಂದಿಷ್ಟು ಜ್ಞಾನ ತುಂಬಲು ನಾದಬ್ರಹ್ಮ ಹಂಸಲೇಖ ಸಿದ್ಧರಾಗಿದ್ದಾರೆ.

ಮಹಾಲಕ್ಷ್ಮಿಪುರಂನ ಹಂಸಲೇಖ ದೇಸಿ ಕಾಲೇಜಿನಲ್ಲಿ ಜು.30 ರಿಂದ ಮೂರು ದಿನಗಳ ಸಿನಿಮಾ ಕಾರ್ಯಾಗಾರವನ್ನು ಸಿನಿಮಾ ತಂತ್ರಜ್ಞರು ಹಾಗೂ ಹಿರಿಯ ಕಲಾವಿದರ ತಂಡ ಆಯೋಜಿಸಿದ್ದಾರೆ.

ಹಂಪಿ ಕನ್ನಡ ವಿವಿಯ ಡಾ. ರಾಜ್ ಅಧ್ಯಯನ ಪೀಠ ಹಾಗೂ ಹಂಸಲೇಖ ದೇಸಿ ಕಾಲೇಜಿನ ಸಹಕಾರದಲ್ಲಿ '3D- 3C' (3Days-3Cinemas )ಎಂಬ ಹೆಸರಿನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ವಿವಿಯ ಕುಲಪತಿ ಡಾ. ಮುರಿಗೆಪ್ಪ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಹಂಸಲೇಖ, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಪ್ರವೇಶ ಶುಲ್ಕ 100 ರು ನೀಡಿ ಅಭ್ಯರ್ಥಿಗಳು ಸಿನಿಮಾ ತಂತ್ರಜ್ಞಾನದ ಒಳ ಹೊರಗನ್ನು ಕಾಣಬಹುದು, ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: (080)2359 2199/6453 9085 ಅಥವಾ [email protected] ಐಡಿಗೆ ಈ ಮೇಲ್ ಮಾಡಿ ವಿವರ ಪಡೆಯಬಹುದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X