ರಮ್ಯಾ ಜೊತೆ ಗುಬ್ಬಿ ಪ್ರೇಮ್ ಕಹಾನಿ ಪಾರ್ಟ್ ಟೂ
ಪ್ರೀತಂ ಗುಬ್ಬಿ ಮತ್ತೊಂದು ಚಿತ್ರಕ್ಕೆ ಕೈಹಾಕಿದ್ದಾರೆ. ಈ ಬಾರಿಯೂ ಅವರ ಚಿತ್ರದ ನಾಯಕಿ ಗೋಲ್ಡನ್ ಗರ್ಲ್ ರಮ್ಯಾ. ಇದು ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರದ ಪಾರ್ಟ್ ಟೂ ಚಿತ್ರ. ದುನಿಯಾ ವಿಜಯ್ ಹಾಗೂ ರಮ್ಯಾ ಅಭಿನಯದ ಜಾನಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಬಂದ ಹಿನ್ನೆಲೆಯಲ್ಲಿ ಗುಬ್ಬಿ ಭಾಗ ಎರಡಕ್ಕೆ ಕೈಹಾಕಿದ್ದಾರೆ.
ಈ ಚಿತ್ರಕ್ಕೆ ಜಾನಿ 2 ಎಂದು ಹೆಸರಿಡಲಾಗಿದೆ. ಆದರೆ ಭಾಗ 2 ಚಿತ್ರ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದೆಯಂತೆ. ಜಾನಿ 1 ಚಿತ್ರದ ಮುಂದುವರಿದ ಕತೆ ಇದಲ್ಲಾ ಅನ್ನುತ್ತಾರೆ ನಿರ್ದೇಶಕರು. ಈಗಾಲೆ ಪೆನ್ನು ಪೇಪರ್ ಹಿಡಿದು ಚಿತ್ರಕತೆ ರಚನೆಯಲ್ಲಿ ತೊಡಗಿದ್ದಾರೆ ಗುಬ್ಬಿ.
ಎಲ್ಲಾ ಅಂದುಕೊಂಡಂತೆ ನಡೆದರೆ ಜನವರಿ 2012ಕ್ಕೆ ಚಿತ್ರ ಸೆಟ್ಟೇರಲಿದೆ. ವಿದೇಶದಲ್ಲೂ ಚಿತ್ರೀಕರಣ ನಡೆಯಲಿದೆ. ರಮ್ಯಾ ಪಾತ್ರದ ಬಗ್ಗೆ ಮಾತನಾಡುತ್ತಾ, ಹಿಂದೊಂದೂ ಮಾಡದ ಪಾತ್ರವಿದು ಎಂದಿದ್ದಾರೆ. ರಮ್ಯಾರ ಹೊಸ ಅವತಾರ ಪ್ರೇಕ್ಷಕರ ಕಣ್ಣು ಕುಕ್ಕುವಂತಿರುತ್ತದೆ ಎಂದಿದ್ದಾರೆ ಗುಬ್ಬಿ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Director Preetham Gubbi has been overwhelmed by the response he has got for his latest movie Johny Mera Naam. He is now gearing up to make a sequel to the film titled Johny 2. Ramya will appear in a highly glamourous getup in the movie.


Click it and Unblock the Notifications











