ಸೆನ್ಸಾರ್ ನಿಂದ 'ಓಕೆ' ಅನ್ನಿಸಿಕೊಂಡ ಗಣೇಶ್ 'ಶೈಲೂ'

ಪ್ರಾದೇಶಿಕ ಸೆನ್ಸಾರ್ ಬೋರ್ಡ್ ನಿಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ ಶೈಲೂ, 'ಯು' ಸರ್ಟಿಫಿಕೇಟ್ ಪಡೆದು ಬಿಡುಗಡೆಯ ದಾರಿಯನ್ನು ಸುಗಮ ಮಾಡಿಕೊಂಡಿದೆ. ಈ ಚಿತ್ರ ಗಣೇಶ್ ಹಾಗೂ ಎಸ್. ನಾರಾಯಣ್ ಇಬ್ಬರಿಗೂ ಅತ್ಯಂತ ಮಹತ್ವದ ಚಿತ್ರವಾಗಿದೆ. ಸದ್ಯಕ್ಕೆ ಇಬ್ಬರೂ ಸೋತು ಸುಣ್ಣವಾಗಿದ್ದಾರೆ.

ಸುದ್ದಿಮೂಲಗಳ ಪ್ರಕಾರ, ಗಣೇಶ್-ಎಸ್. ನಾರಾಯಣ್ ಜೋಡಿಯ 'ಶೈಲೂ' ಚಿತ್ರ ಸಾಕಷ್ಟು ಚೆನ್ನಾಗಿ, ವಿಭಿನ್ನವಾಗಿ ಮೂಡಿ ಬಂದಿದೆ. ಈ ಚಿತ್ರದ ಮೂಲಕ ಗಣೇಶ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ತಮ್ಮಇಮೇಜ್ ಮರಳಿ ಪಡೆಯಬೇಕಾಗಿದೆ. ಬಹುನಿರೀಕ್ಷೆಯ ಚಿತ್ರ 'ಮದುವೆ ಮನೆ' ಮಕಾಡೆ ಮಲಗಿದ ಮೇಲೆ ಗಣೇಶ್ ಚಿತ್ತವೀಗ ಶೈಲೂ ಸುತ್ತಲೇ ಸುತ್ತುತ್ತಿದೆ. ಈಗ ಶಿಲ್ಪಾ-ಗಣೇಶ್ ರನ್ನು ಶೈಲೂ ಕಾಪಾಡಬೇಕಿದೆ.

ಎಸ್. ನಾರಾಯಣ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಮಗ ಪಂಕಜ್ ನನ್ನು 'ಹೀರೋ' ಮಾಡಲು ಹೋಗಿ 'ಹರೋಹರ' ಆಗಿರುವ ನಾರಾಯಣ್, ಶೈಲು ಮೂಲಕ 'ಫಿನಿಕ್ಸ್'ನಂತೆ ಮೇಲೆರುವ ಕನಸು ಕಾಣುತ್ತಿದ್ದಾರೆ. ಇಬ್ಬರೂ ಮರುಹುಟ್ಟು ಪಡೆಯುವ ನಿರೀಕ್ಷೆಯ ಚಿತ್ರ ಶೈಲೂ, ಇನ್ನೊಂದು 'ಚೆಲುವಿನ ಚಿತ್ತಾರ' ಆಗಲಿದೆ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Golden Star Ganesh starrer Shyloo has got a clean chit from the Regional Censor Board. As expected, the Kannada movie has bagged clean U certificate and clearing for its release without any hurdle.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X