ದ್ವಾರ್ಕಿ ಎರಡನೇ ಮದುವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್

ಕಾದಂಬರಿ ಸುಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ದುಃಖಾಂತವಾಗಿದ್ದರೂ ಸ್ವೀಕರಿಸುತ್ತೇನೆ. ಇಷ್ಟನ್ನು ಹೇಳಿ ಮೌನವಾದೆ. ಐದೇ ಐದು ನಿಮಿಷ ಯೋಚಿಸಿದ ಅಂಬುಜಾ ಆ ನೋಟ್ ಪುಸ್ತಕವನ್ನು ಹತ್ತಿರ ಎಳೆದುಕೊಂಡು ಕೊನೆಯ ಪುಟದಲ್ಲಿ ಅದೇನನ್ನೋ ಬರೆದಳು. ನಾನು ಓದಿದೆ : ನಿಮ್ಮ ಸಂತೋಷವೇ ನನ್ನ ಸಂತೋಷ. ಹೆಂಡಗಿಯ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೆ ಅಲ್ಲಿಂದಲೇ ಫೋನ್ ಮಾಡಿ ಶೈಲಜಾಗೆ ವಿಷಯ ತಿಳಿಸಿದೆ.
ಅಂಬುಜಾ ಕೂಡಾ ಆಕೆಯ ಜೊತೆ ಮಾತನಾಡಿದಳು. ಐವರು ಮಕ್ಕಳೂ ಕಂಗ್ರಾಟ್ಸ್ ಹೇಳಿದರು. ನೀವು ನಂಬುವುದಿಲ್ಲ. ಆದರೆ ಇದು ನಿಜ. ಎಲ್ಲರ ಹಾಜರಿಯಲ್ಲೇ ನಾನು ಶೈಲಜಾಳ ಕುತ್ತಿಗೆಗೆ ತಾಳಿ ಕಟ್ಟಿದೆ. ಮೊದಲ ಹೆಂಡತಿ, ಮಕ್ಕಳೆಲ್ಲಾ ಶುಭ ಹಾರೈಸಿದರು. ಸಿನಿಮಾದಲ್ಲಾದರೆ ದುಃಖಾಂತವಾಗಬಹುದಾಗಿದ್ದ ಕಥೆ ನನ್ನ ಸ್ವಂತ ಬದುಕಿನಲ್ಲಿ ಸುಖಾಂತವಾಯಿತು. ದಟ್ ಈಸ್ ದ್ವಾರಕೀಶ್..." ಎಂದು ಹೇಳಿ ದ್ವಾರಕೀಶ್ ಮತ್ತೆ ಗೊಳ್ಳೆಂದು ನಕ್ಕರು. ನಾನು ನಗಲಿಲ್ಲ. (ಕೃಪೆ: ಆಫ್ ದಿ ರೆಕಾರ್ಡ್)
More from Filmibeat
English summary
Kannada actor Dwarakish second marriage, love episode, personal life etc by Ganesh Kasaragodu's book Off The Record. The book throws light on another side of actors life. Bungle Shama Rao Dwarakanath, better known as Dwarakish or Dwarakesh (born 19 August 1942), is an actor, director and producer in the Kannada films.


Click it and Unblock the Notifications











