»   » ಜೂನಿಯರ್ ತ್ರಿಶಾ ಕುರಿತು ಹಾಗೆ ಸುಮ್ಮನೆ!

ಜೂನಿಯರ್ ತ್ರಿಶಾ ಕುರಿತು ಹಾಗೆ ಸುಮ್ಮನೆ!

Subscribe to Filmibeat Kannada
Haage Summane actress Suhasi
ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ 'ಹಾಗೆ ಸುಮ್ಮನೆ' ಚಿತ್ರ ಪ್ರೇಕ್ಷಕ ವಲಯದಲ್ಲಿ ಚಿತ್ರೋದ್ಯಮದಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಹಾಗೆಯೇ ಈ ಚಿತ್ರದ ನಾಯಕಿ ಸುಹಾಸಿ ಬಗ್ಗೆ ಕೂಡ ಪ್ರೇಕ್ಷಕರು ಪುಳಕಗೊಂಡಿದ್ದಾರೆ.

ನಟನೆ ಎನ್ನುವುದು ಈಕೆಗೆ ಹೊಸದೇನು ಅಲ್ಲ. ಈಗಾಗಲೇ ಈಕೆ ಸ್ಟಾರ್ ಪ್ಲಸ್ ವಾಹಿನಿಯ ಹಿಂದಿ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಹಾಗೆ ಸುಮ್ಮನೆ ಎನ್ನುತ್ತಾ ಬೆಳ್ಳಿತೆರೆಯತ್ತ ಹೆಜ್ಜ್ಜೆ ಹಾಕಿದ್ದಾರೆ. ಸ್ಲೈಸ್ ಮತ್ತು ಬಬ್ಬಲ್ ಗಮ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈಕೆ ಈಗ ನಾಯಕಿ ಪಟ್ಟ ಅಲಂಕರಿಸಿದ್ದಾರೆ.

ಅಂದಹಾಗೆ ಈಕೆ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಪ್ರಸ್ತುತ ಈಕೆ ತೆಲುಗು ಚಿತ್ರವೊಂದರಲ್ಲೂ ನಟಿಸುತ್ತಿದ್ದಾರೆ. ಮುಂಬೈ ಮೂಲದ ಈ ಬೆಡಗಿ ಈಗ ದಕ್ಷಿಣ ಭಾರತದಲ್ಲಿ ತನ್ನ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈಗಾಗಲೇ ಈಕೆಗೆ ಜೂನಿಯರ್ ತ್ರಿಶಾ ಎಂಬ ಬಿರುದನ್ನು ದಯಪಾಲಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತ್ರಿಶಾ ಬರಲಿಲ್ಲವಾದರೂ ಮುಂಬೈ ಮೂಲದ ಜೂನಿಯರ್ ತ್ರಿಶಾ ಬರುತ್ತಿದ್ದಾರಲ್ಲ ಎಂದು ಪ್ರೇಕ್ಷಕರು ಸಮಾಧಾನಪಡಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಹಾಗೆ ಸುಮ್ಮನೆ ಚಿತ್ರದ ನಾಯಕಿ ಸುಹಾಸಿ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada