ನಟಿ ಖುಷ್ಬೂಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಆಡಳಿತಪಕ್ಷ ಡಿಎಂಕೆ ಪರ ಖುಷ್ಬೂ ಪ್ರಚಾರ ಮಾಡಿದ್ದರು. ಆಂಡಿಪಟ್ಟಿಯಲ್ಲಿ ಪೊಲೀಸರ ಹಾಗೂ ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪ ನಟಿ ಖುಷ್ಬೂ ಮೇಲಿದೆ.
ತಾವು ಜನಪ್ರಿಯ ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತಿದ್ದೇವೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದೆವು. ತಮ್ಮ ವಿರುದ್ಧ ದಾಖಲಿಸಿರುವ ಕೇಸ್ ಸತ್ಯಕ್ಕೆ ದೂರವಾದದ್ದು ಎಂದು ಜಾಮೀನು ಕೋರಿ ಖುಷ್ಬು ಅರ್ಜಿ ಸಲ್ಲಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಅರ್ಜಿಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ.
ಸಮಾಧಾನದ ಸಂಗತಿ ಎಂದರೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಮತ್ತೊಂದು ಕೇಸ್‌ನಲ್ಲಿ ಖುಷ್ಬೂಗೆ ಜಾಮೀನು ಸಿಕ್ಕಿರುವುದು. ತಮಿಳುನಾಡಿನ ಥೇನಿ ಜಿಲ್ಲೆಯ ಪಾನ್‌ಚೆಟ್ಟಿಪಟ್ಟಿಯಲ್ಲಿ ಖುಷ್ಬೂ ವಿರುದ್ಧ ಕೇಸು ದಾಖಾಲಾಗಿತ್ತು. (ಏಜೆನ್ಸೀಸ್)
More from Filmibeat
English summary
The Madurai Bench of the Madras High court dismissed Khusbhoo's petition seeking anticipatory bail in connection with a case related to election campaign, which was registered in Andipatti.


Click it and Unblock the Notifications











