»   » ಸಾಫ್ಟ್ ಡ್ರಿಂಕ್ ಜಾಹೀರಾತಿಗೆ ಹಾಟ್ ಬೆಡಗಿ ತಮನ್ನಾ

ಸಾಫ್ಟ್ ಡ್ರಿಂಕ್ ಜಾಹೀರಾತಿಗೆ ಹಾಟ್ ಬೆಡಗಿ ತಮನ್ನಾ

Posted By:
Subscribe to Filmibeat Kannada

ತಂಪು ತಂಪು ಕೂಲ್ ಕೂಲ್ ಪಾನೀಯ ಪಾಂಟಾಗೆ ನೂತನ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ, ಹಾಟ್ ಬೆಡಗಿ ತಮನ್ನಾ ಭಾಟಿಯಾ ಆಯ್ಕೆಯಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಪಾಂಟಾ ರಾಯಭಾರಿಯಾಗಿ ತಮನ್ನಾ ಇನ್ನು ಮುಂದೆ ಕಾಣಿಸಲಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ತಮನ್ನಾ, "ಪಾಂಟಾಗೆ ಆಯ್ಕೆಯಾಗಿರುವ ಬಗ್ಗೆ ತುಂಬ ಖುಷಿಯಾಗುತ್ತಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತೇನೆ" ಎಂದಿದ್ದಾರೆ ತಮನ್ನಾ. ಈಗಾಗಲೆ ಪಾಂಟಾ ಜಾಹೀರಾತಿನ ಚಿತ್ರೀಕರಣ ನಡೆದಿದ್ದು, ಏಪ್ರಿಲ್ 24ರಿಂದ ಎಲ್ಲಾ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಲಿದೆ.

ಪಾಂಟಾ ಸಾಫ್ಟ್ ಡ್ರಿಂಕ್‌ಗೆ ಪ್ರಮುಖ ಸ್ಪರ್ಧಿಯಾಗಿರುವ ಮತ್ತೊಂದು ಬ್ರಾಂಡ್ ಮಿರಿಂಡಾಗೆ ರಾಯಭಾರಿಯಾಗಿ ಮತ್ತೊಬ್ಬ ಬೆಡಗಿ ಅಸಿನ್ ಕಾಣಿಸುತ್ತಿದ್ದಾರೆ. ಈಗ ಅಸಿನ್ ಮತ್ತು ತಮನ್ನಾ ನಡುವಿನ ಪೈಪೋಟಿಗೂ ಪಾಂಟಾ ದಾರಿ ಮಾಡಿಕೊಟ್ಟಿದೆ. (ಏಜೆನ್ಸೀಸ್)

English summary
Hot actress Tamannaah Bhatia has been roped in as the face of soft drink brand Fanta. She will be its brand ambassador in Tamil Nadu and Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada