ಜೊತೆಗಾರ ಬಾಕ್ಸಾಫೀಸ್ ಗಳಿಕೆ ಎಷ್ಟು ಗೊತ್ತೆ?
ಬಾಕ್ಸಾಫೀಸ್ ಗಳಿಕೆಯಲ್ಲಿ 'ಜೊತೆಗಾರ' ಚಿತ್ರ ಭರ್ಜತಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಚಿತ್ರದಗಳಿಕೆ ನಿರ್ಮಾಪಕರಾದ ಅಶ್ವಿನಿ ರಾಮ್ ಪ್ರಸಾದ್ ಮತ್ತು ಕೃಷ್ಣಪ್ರಸಾದ್ ಅವರನ್ನು ಝಕ್ಕಣಕ್ಕ ಎಂದು ಕುಣಿಯುವಂತೆ ಮಾಡಿದೆ. ಮೊದಲ ವಾರದ ಗಳಿಕೆ ರು.1.2 ಕೋಟಿ ಎನ್ನುತ್ತವೆ ಮೂಲಗಳು.
ಸರಿಸುಮಾರು 45 ಚಿತ್ರಮಂದಿರಗಳಲ್ಲಿ 'ಜೊತೆಗಾರ' ಚಿತ್ರ ಪ್ರೇಕ್ಷಕರ ಸಂಖ್ಯೆಯನ್ನು ನಿರಂತರವಾಗಿ ಹಿಡಿದಿಟ್ಟಿದೆ. ಅದರಲ್ಲೂ ಮುಖ್ಯವಾಗಿ ದಿನದಿಂದ ದಿನಕ್ಕೆ ಫ್ಯಾಮಿಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಸುದೀರ್ಘ ಸಮಯದ ಬಳಿಕ ಬಿಡುಗಡೆಯಾಗುತ್ತಿರುವ ಈ ಚಿತ್ರದಟಿವಿ ಹಕ್ಕುಗಳು ರು.81 ಲಕ್ಷಕ್ಕೆ ಮಾರಾಟವಾಗಿದ್ದವು.
'ಜೊತೆಗಾರ' ಚಿತ್ರ ಈ ಪಾಟಿ ಯಶಸ್ವಿಗಳಿಸುತ್ತದೆ ಎಂದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಊಹಿಸಿರಲಿಲ್ಲ. ಚಿತ್ರದ ಗೆಲುವು ಅವರನ್ನು ಕೊಂಚ ನಿರಾಳಗೊಳಿಸಿದೆ. ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಮತ್ತು ರಮ್ಯಾ ಜೋಡಿಯನ್ನು ಪ್ರೇಕ್ಷಕರು ಸ್ವಾಗತಿಸಿದ್ದಾರೆ. ಸುಶ್ರಾವ್ಯವಾದ ಸಂಗೀತ, ಮನಮುಟ್ಟುವ ಸಂಭಾಷಣೆಯೇ ಚಿತ್ರದ ಮುಖ್ಯ ಆಕರ್ಷಣೆ. 'ಜೊತೆಗಾರ'ನನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದಕ್ಕೆ ಪ್ರೇಮ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ.


Click it and Unblock the Notifications











