ಗ್ರಾಫಿಕ್ಸ್‌ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ ಜರಾಸಂಧ

By Rajendra

ಜರಾಸಂಧ ಚಿತ್ರಕ್ಕೆ ಹೈದರಾಬಾದ್‌ನ ಪ್ರೈಂ ಫೋಕರ್ಸ್ ಸ್ಟುಡಿಯೋದಲ್ಲಿ ಗ್ರಾಫಿಕ್ಸ್ ಹಾಗೂ ಡಿಐ ಅಳವಡಿಸಲಾಗುತ್ತಿದೆ. ಚಿತ್ರದ ಸಹಜತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಫಿಕ್ ಬಳಿಸಿಕೊಳ್ಳುತ್ತಿರುವುದಾಗಿ ತಿಳಿಸಿರುವ ನಿರ್ದೇಶಕ ಶಶಾಂಕ್ ಸುಮಾರು ಐವತ್ತು ಲಕ್ಷ ರೂಪಾಯಿ ಗ್ರಾಫಿಕ್‌ಗಾಗಿ ಖರ್ಚು ಮಾಡಲಾಗುತ್ತಿದೆ ಎಂದಿದ್ದಾರೆ.

ಸದ್ಯದ ಮಟ್ಟಿಗೆ ಕನ್ನಡದ ಯಾವ ಚಿತ್ರಕ್ಕೂ ಗ್ರಾಫಿಕ್ ಅಳವಡಿಕೆಗೆ ಇಷ್ಟು ಖರ್ಚು ಮಾಡಿಲ್ಲ ಎನ್ನುತ್ತಾರೆ ಶಶಾಂಕ್. ಚಿತ್ರಕ್ಕೆ ಬೆಂಗಳೂರಿನಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದ್ದು, ಸೆಪ್ಟಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕರ್ನಾಟಕದ ರಮಣೀಯ ಸ್ಥಳಗಳು, ಚಾಲುಕುಡಿ ಜಲಪಾತ ಹಾಗೂ ವಿದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ.

ಸಾಹಸ ಪ್ರಧಾನ ಈ ಚಿತ್ರದ ನಾಯಕರಾಗಿ ವಿಜಯ್ ಅಭಿನಯಿಸಿದ್ದಾರೆ. ಪ್ರಣೀತಾ, ದೇವರಾಜ್, ರೂಪಾದೇವಿ, ಜೆ.ಕೆ, ರಂಗಾಯಣ ರಘು, ಸ್ವಯಂವರ ಚಂದ್ರು, ಚೇತನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಜರಾಸಂಧನಿಗೆ ಶಶಾಂಕ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶೇಖರ್‌ಚಂದ್ರರ ಛಾಯಾಗ್ರಹಣ, ಅರ್ಜುನ್ ಸಂಗೀತ, ಶ್ರೀ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ಅನಿಲ್ ಅವರ ನಿರ್ಮಾಣ ನಿರ್ವಹಣೆಯಿರುವ 'ಜರಾಸಂಧ' ಚಿತ್ರಕ್ಕಿದೆ.(ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
The DI Technology to the Kannada film Jarasandha implemented in Hyderabad. Rs.50 lakhs are spent for this movie said the director Shashank. Duniya Vijay and Pranitha are playing lead roles in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X