ಬಿಡುಗಡೆಗೆ ಸಿದ್ಧವಿರುವ ಕಾರ್ತಿಕ್ ಚಿತ್ರದ ಕಥೆ ವ್ಯಥೆ

By Rajendra

ಕಳೆದ ವರ್ಷ ಬಿಡುಗಡೆಯಾಗಿದ್ದ ಯುವ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿ, ಪ್ರತಿಭಾವಂತ ಆಕ್ಷನ್ ಹೀರೋ ಎಂದೇ ಗುರುತಿಸಿಕೊಂಡಿದ್ದ ಕಾರ್ತಿಕ್‌ಶೆಟ್ಟಿ ಅಭಿನಯದ ಕಾರ್ತಿಕ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಯಕ ಕುದುರೆಗಳನ್ನು ಪಳಗಿಸುವ ತರಬೇತುದಾರ. ತಾಯಿಯೊಂದಿಗೆ ನಗರದಿಂದ ದೂರವಿದ್ದ ಪ್ರಶಾಂತ ಸ್ಥಳದಲ್ಲಿ ಈತನ ವಾಸ.

ಕಾಲದ ವೈಪರೀತ್ಯದಿಂದ ಶ್ರೀಮಂತಿಕೆ, ತಂದೆ, ಆಸ್ತಿ, ಪಾಸ್ತಿ ಎಲ್ಲವನ್ನು ಕಳೆದುಕೊಂಡು ಮಾನಸಿಕ ನೆಮ್ಮದಿಗೆ ತನ್ನ ಪಾಡಿಗೆ ತಾನು ನಾಯಕ ವಾಸ ಮಾಡುತ್ತಿರುವ. ಅನಿರೀಕ್ಷಿತ ಘಟನೆಗಳಿಂದ ಬಾಲ್ಯ ಗೆಳತಿಯೊಡನೆ ಮುಖಾ-ಮುಖಿಯಾಗುವವಂತಹ ಸಂದರ್ಭ ಕಾರ್ತಿಕ್‌ಗೆ ಎದುರಾಗುತ್ತದೆ. ಆ ಗೆಳತಿಯ ಭೇಟಿಯಿಂದ ಆತನ ಜೀವನದಲ್ಲೂ ಯಾತನೆಯ ಘಟನೆಗಳು ಎದುರಾಗುತ್ತವೆ. ಇವೆಲ್ಲವನ್ನು ನಾಯಕ ನಿಭಾಯಿಸುವ ಕಥಾ ಹಂದರವಿರುವ ಈ ಚಿತ್ರವನ್ನು ಸತೀಶ್ ಬಿ.ಶೆಟ್ಟಿ ನಿರ್ದೇಶಿಸಿದ್ದಾರೆ.

ಯಶೋಧ ಮೂವಿಟೋನ್ಸ್ ಚಿತ್ರ ತಯಾರಿಸಿದೆ. ಮಂಜುನಾಥ್ ಛಾಯಾಗ್ರಯಣ, ಜಾನ್‌ವರ್ಕಿ ಸಂಗೀತ, ಹೃದಯಶಿವ ಸಾಹಿತ್ಯ, ನಂಜುಂಡಿನಾಗರಾಜ್ ಮತ್ತು ಪಿ.ಕೆ.ಸಾಹಸ ಚಿತ್ರದಲ್ಲಿದೆ. ಕಾರ್ತಿಕ್ ಶೆಟ್ಟಿ, ಅರ್ಚನಾಗುಪ್ತ, ಅವಿನಾಶ್, ಸುಧಾ ಬೆಳವಾಡಿ, ರಾಜ್ ಪುರೋಹಿತ್, ಸುನಿಲ್‌ಕುರಿ, ವೇಣುಗೋಪಾಲ್ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Kannada movie Karthik is set to release on 25th February. Here is the Karthik movies brief story. The movie leads Karthik Shetty and Archana Gupta directing by Satish B Shetty. Avinash, Sudha Belavadi, Kuri fame Sunil are also in the cast of the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X