ಬಾಕ್ಸಾಫೀಸಲ್ಲಿ ಸೂಪರ್, ಜಾಕಿಗೆ ಕೆಂಪೇಗೌಡ ಸಡ್ಡು

By Rajendra

ಸುದೀಪ್ ಆಕ್ಷನ್, ಕಟ್ ಹೇಳಿ ಸ್ವತಃ ಅಭಿನಯಿಸಿರುವ 'ಕೆಂಪೇಗೌಡ' ಚಿತ್ರ ಮೊದಲ ಎರಡು ವಾರದ ಗಳಿಕೆ ಸೂಪರ್ ಎಂಬ ಮಾತುಗಳು ಕೇಳಿಬಂದಿವೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಉಪೇಂದ್ರ ಅಭಿನಯದ ಸೂಪರ್, ಪುನೀತ್ ರಾಜ್ ಕುಮಾರ್ ಅವರ ಜಾಕಿ ಹಾಗೂ ದರ್ಶನ್ ಅವರ ಬಾಸ್ ಚಿತ್ರದ ಎರಡು ವಾರದ ಗಳಿಕೆಯನ್ನು 'ಕೆಂಪೇಗೌಡ' ಹಿಂದಿಕ್ಕಿದೆ ಎಂಬುದು ಗಾಂಧಿನಗರದ ಲೇಟೆಸ್ಟ್ ರಿಪೋರ್ಟ್.

ಸದ್ಯಕ್ಕೆ 'ಕೆಂಪೇಗೌಡ' ಚಿತ್ರ 150 ಚಿತ್ರಮಂದಿರಗಳಲ್ಲಿ ರಾಜ್ಯದಾದ್ಯಂತ ಪ್ರದರ್ಶನ ಕಾಣುತ್ತಿದೆ. ರಾಜ್ಯದಾದ್ಯಂತ ಚಿತ್ರದ ಒಟ್ಟಾರೆ ಗಳಿಕೆ ಭರ್ಜರಿಯಾಗಿದ್ದು ನಿರ್ಮಾಪಕ ಶಂಕರೇಗೌಡರ ಪಾಲು ಶೇ.75ಕ್ಕೂ ಹೆಚ್ಚಿದೆ ಎನ್ನುತ್ತವೆ ಮೂಲಗಳು. ಚಿತ್ರಕ್ಕೆ ಹೆಚ್ಚು ಪ್ರಚಾರ ನೀಡದಿದ್ದರೂ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.

ಸುದೀಪ್ ಅಭಿನಯಿಸಿದ ರೀಮೇಕ್ ಚಿತ್ರಗಳೆಲ್ಲಾ ಬಾಕ್ಸಾಫೀಸಲ್ಲಿ ಸದ್ದು ಮಾಡಿದವೆ. ಈಗ ಆ ಪಟ್ಟಿಗೆ ತಮಿಳು 'ಸಿಂಗಂ' ರೀಮೇಕ್ 'ಕೆಂಪೇಗೌಡ' ಹೊಸ ಸೇರ್ಪಡೆ. ಸುದೀಪ್ ಮತ್ತು ಸಾಯಿಕುಮಾರ್ ಸಹೋದರ ರವಿ ಶಂಕರ್ ನಡುವಿನ ಸಂಭಾಷಣೆ ಪ್ರೇಕ್ಷಕರಿಗೆ ಹಿಡಿಸಿದೆ. ತಾಂತ್ರಿಕವಾಗಿ ಚಿತ್ರ ಸಂಪದ್ಭರಿತವಾಗಿದ್ದು ಅರ್ಜುನ್ ಅವರ ಸಂಗೀತ ಮತ್ತೊಂದು ಪ್ಲಸ್ ಪಾಯಿಂಟ್.

More from Filmibeat

English summary
Kannada film industry sources says that Sudeep lead film Kempe Gowda box office collection is slightly more than Jackie (Puneet Rajkumar), Super (Upendra) and Boss (Darshan) in the first two weeks. Sudeep and Ragini Dwivedi lead film successfully running in 150 plus theatres all over Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X