ವಿ ಹರಿಕೃಷ್ಣ ನಿರ್ಮಾಣದಲ್ಲಿ ಅಜಯ್ ರಾವ್ ಹೀರೋ

ಎಸ್ ವಿ ಬಾಬು ಅವರ 'ಸಂಗಮ' ಚಿತ್ರವನ್ನು ನಿರ್ದೇಶಿಸಿದ್ದ ರವಿವರ್ಮ ಆಕ್ಷನ್ ಕಟ್‌ನಲ್ಲಿ ಹರಿಕೃಷ್ಣ ಅವರ ಚಿತ್ರ ಮೂಡಿಬರಲಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರವನ್ನು ಎಸ್ ವಿ ಬಾಬು ಅವರೇ ನಿರ್ಮಿಸಬೇಕಾಗಿತ್ತು. ಆದರೆ ಬಾಬು ನಿರ್ಮಾಣದ ತೆಲುಗು ಚಿತ್ರ 'ಕೆರಟಂ' ಮಕಾಡೆ ಮಲಗಿದ ಕಾರಣ ಅವರು ಚಿತ್ರವನ್ನು ಕೈಬಿಟ್ಟಿದ್ದರು.
ಈಗ ಅದೇ ಚಿತ್ರವನ್ನು ವಿ ಹರಿಕೃಷ್ಣ ನಿರ್ಮಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೆ ಈ ಚಿತ್ರ ಸೆಟ್ಟೇರಲಿದೆ. ಚಿತ್ರಕ್ಕೆ ರಮ್ಯಾ ನಂಬೀಸನ್ ನಾಯಕಿಯಾಗುವ ಸಾಧ್ಯತೆಗಳಿವೆ. ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಸದ್ಯಕ್ಕೆ ಸಂಗೀತ ಸಂಯೋಜನೆಯಲ್ಲಿ ಹರಿಕೃಷ್ಣ ಬ್ಯುಸಿಯಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Music director V Harikrishna turned into a full fledged producer. The film is all set to be launched shortly. Ajay Rao has been selected as hero and Ravi Varma as a director.


Click it and Unblock the Notifications











