ನರ್ತಕಿ ಚಿತ್ರಮಂದಿರದಲ್ಲಿ ಮೈಲಾರಿಗೆ ಕ್ಷೀರಾಭಿಷೇಕ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮೈಲಾರಿ' ಚಿತ್ರ ಶುಕ್ರವಾರ (ಡಿ.24) 130 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಚಿತ್ರ ಬಿಡುಗಡೆಗೂ ಒಂದು ದಿನ ಮುಂಚೆ ಊರೂರಲ್ಲೂ 'ಮೈಲಾರಿ ಜಾತ್ರೆ' ಮಾಡಲು ಮುಂದಾಗಿದ್ದಾರೆ ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್.
ಜಾತ್ರೆಯ ಹಿನ್ನೆಲೆಯಲ್ಲಿ ಮೈಲಾರಿ ಬಿಡುಗಡೆಯಾಗುತ್ತಿರುವ ಚಿತ್ರ ಮಂದಿರಗಳ ಬಳಿ ಅದ್ಭುತ ಎನಿಸುವ ಕಟೌಟ್‌ಗಳು ತಲೆಯೆತ್ತಿವೆ. ಮೈಲಾರಿ ಕಟೌಟ್ ಬರೋಬ್ಬರಿ 72 ಅಡಿಗಳಷ್ಟು ಎತ್ತರವಿದ್ದರೆ, ಅಕ್ಕಪಕ್ಕ ವರನಟ ಡಾ.ರಾಜ್ ಕುಮಾರ್ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಕಟೌಟ್‌ಗಳು (ಸುಮಾರು 40 ರಿಂದ 45 ಅಡಿ ಎತ್ತರ) ನಿಲ್ಲಿಸಲಾಗಿದೆ.
ಮೈಲಾರಿ ಬಿಡುಗಡೆಯಾಗುತ್ತಿರುವ ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಬಳಿ ಕಟೌಟ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ, ಹೂವಿನ ಹಾರಗಳನ್ನು ಹಾಕಿ ಗುರುವಾರ ಸಂಜೆ ಸಂಭ್ರಮಿಸಿದರು. ಬೆಂಗಳೂರು ಕೆ ಜಿ ರಸ್ತೆಯಲ್ಲಿ 'ಸ್ಟಾರ್'ಗಳ ಮೆರವಣಿಗೆಯೂ ನಡೆಯಲಿದೆ. ಮೈಸೂರು, ಹಾಸನ, ಮಂಡ್ಯ, ಮಳವಳ್ಳಿಗಳಲ್ಲೂ ಶಿವರಾಜ್ ಕುಮಾರ್ ಅಭಿಮಾನಿಗಳು 'ಮೈಲಾರಿ' ಮೆರವಣಿಗೆಯನ್ನುಹಮ್ಮಿಕೊಂಡಿದ್ದಾರೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ಬೆಂಗಳೂರಿನ ಅಖಿಲ ಕರ್ನಾಟಕ ಅನ್ನಯ್ಯ ಚಿರಂಜೀವಿ ಅಭಿಮಾನಿಗಳ ಕ್ಷೇಮಾಭಿವೃದ್ಧಿ ಸಂಘ 'ಮೈಲಾರಿ' ಜಾತ್ರೆಯಲ್ಲಿ ಪಾಲ್ಗೊಳ್ಳಲಿದೆ. ಶುಕ್ರವಾರ ಬೆಳಗ್ಗೆ (ಡಿ.24) ಕಟೌಟ್‌ಗೆ ಹಾರಗಳ ಸಮರ್ಪಣೆ ಹಾಗೂ ಹಾಲಿನ ಅಭಿಷೇಕ ನಡೆಯಲಿದೆ. ನಾವು ಯಾವುದೇ ಭೇದ ಭಾವವಿಲ್ಲದೆ 'ಮೈಲಾರಿ' ಚಿತ್ರ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ. [ಮೈಲಾರಿ]


Click it and Unblock the Notifications











