For Quick Alerts
  ALLOW NOTIFICATIONS  
  For Daily Alerts

  ಸಿಂಹ ಚಿತ್ರದಿಂದ ಓಂ ಪ್ರಕಾಶ್ ರಾವ್‌ಗೆ ಗೇಟ್ ಪಾಸ್

  By Rajendra
  |

  ಚಲನಚಿತ್ರ ನಿರ್ಮಾಪಕ ರಾಮು ತಮ್ಮ ಮುಂದಿನ ಚಿತ್ರ 'ಸಿಂಹ' ಚಿತ್ರದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್‌ಗೆ ಗೇಟ್ ಪಾಸ್ ನೀಡಿದ್ದಾರೆ. ಆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಮಾದೇಶ ಅವರ ಹೆಗಲಿಗೆ ಹೊರಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.

  ಎಲ್ಲವೂ ಅಂದುಕೊಂಡಂತೆ ನಡೆದರೆ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ (ಏಪ್ರಿಲ್ 24) ರಂದು 'ಸಿಂಹ' ಚಿತ್ರ ಸೆಟ್ಟೇರಲಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣನ 102ನೇ ಚಿತ್ರ ಇದು. ಈ ಹಿಂದೆ ರಾಮು ನಿರ್ಮಿಸಿದ್ದ 'ಸಿಂಹದ ಮರಿ' ಮತ್ತು 'ಎಕೆ 47' ಚಿತ್ರಗಳಿಗೆ ಓಂ ಆಕ್ಷನ್, ಕಟ್ ಹೇಳಿದ್ದರು. ಅವೆರಡೂ ಚಿತ್ರಗಳು ಭರ್ಜರಿ ಯಶಸ್ಸು ದಾಖಲಿದ್ದವು. ಶಿವಣ್ಣನಿಗೆ ಒಳ್ಳೆ ಹೆಸರು ತಂದುಕೊಟ್ಟ ಚಿತ್ರಗಳು. ಆದರೆ ಓಂರನ್ನು ರಾಮು ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದೆ.

  ಮೂಲಗಳ ಪ್ರಕಾರ, ರಾಮು ಅವರ ಮತ್ತೊಂದು ಚಿತ್ರ 'ಭೀಮ'ನಿಗೆ ಓಂ ಪಕ್ಕಾ ಕತೆ ಹೆಣೆಯುತ್ತಿದ್ದಾರಂತೆ. ಹಾಗಾಗಿ 'ಸಿಂಹ' ನಿರ್ದೇಶಿಸುವ ಅವಕಾಶವನ್ನು ಮಾದೇಶ ಹೆಗಲಿಗೆ ಹೊರಿಸಿದ್ದಾರಂತೆ. ಅಂದಹಾಗೆ 'ಭೀಮ' ಚಿತ್ರ ನಾಯಕ ನಟ ದರ್ಶನ್. ಸದ್ಯಕ್ಕೆ ಮಾದೇಶ ಅವರು 'ದಂಡಂ ದಶಗುಣಂ' (ರಮ್ಯಾ, ಚಿರಂಜೀವಿ ಸರ್ಜಾ) ಹಾಗೂ ಪುನೀತ್ ಅವರ 'ಹುಡುಗ್ರು' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದಾದ ಬಳಿಕವಷ್ಟೇ 'ಸಿಂಹ' ಮಾದೇಶ ಸಿಂಹದ ಭೇಟೆಯಾಡಲಿದ್ದಾರೆ.

  English summary
  Century Star Shivaraj Kumar lead film Simha to direct Maadesh. Earlier Ramu had selected Om Prakash Rao to direct the film.Which is the 102nd film of Shivarajkumar. The film is suppose to aunched on April 24, the birthday of movie icon Dr. Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X