For Quick Alerts
  ALLOW NOTIFICATIONS  
  For Daily Alerts

  ಪ್ರಭುದೇವ ಆಕ್ಷನ್ ಕಟ್‌ನಲ್ಲಿ ರಾಮ್ ಚರಣ್ ತೇಜ

  By Rajendra
  |

  ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಗೆ ನಿರ್ದೇಶಕನಾಗಿ ಬದಲಾಗಿರುವ ನಟ ಕಮ್ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಆಕ್ಷನ್ ಕಟ್ ಹೇಳಲಿದ್ದಾರೆ. ಒಂದು ವರ್ಷದ ಹಿಂದೆಯೇ ಚರಣ್‌ಗೆ ಪ್ರಭುದೇವ ಚಿತ್ರಕತೆಯನ್ನು ಹೇಳಿದ್ದರಂತೆ. ಆದರೆ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ.

  ಇತ್ತೀಚೆಗೆ ಪ್ರಭುದೇವ ಅಸಲಿ ಕತೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಮತ್ತೆ ಚಿರಂಜೀವಿ ಬಳಿಗೆ ಹೋಗಿದ್ದರಂತೆ. ಕತೆ ಕೇಳಿ ಖುಷಿಯಾಗಿರುವ ಚಿರಂಜೀವಿ ಮನೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನುತ್ತವೆ ಟಾಲಿವುಡ್ ಮೂಲಗಳು.

  ಪ್ರಭುದೇವ ಸದ್ಯಕ್ಕೆ ಹಿಂದಿಯಲ್ಲಿ 'ರೌಡಿ ರಾಥೋಡ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೆ ನಿರ್ದೇಶಕನಾಗಿ ಪ್ರಭುದೇವ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಗೆದ್ದಿದ್ದಾರೆ. ಮೊದಲೇ ಡ್ಯಾನ್ಸ್ ಮಾಸ್ಟರ್ ಕತೆ ಸುಮಾರಾಗಿದ್ದು ಹಾಡುಗಳು ಭರ್ಜರಿಯಾಗಿದ್ದರೆ 'ದೂಕುಡು' ನೂಕು ನುಗ್ಗುಡು ಕತೆ ಆಗುವ ಎಲ್ಲ ಲಕ್ಷಣಗಳಿವೆ. (ಏಜೆನ್ಸೀಸ್)

  English summary
  If Tollywood sources are to be believed, leading choreographer-actor-director Prabhu Deva will soon direct young superstar Ram Charan Teja. Recently, Prabhu Deva approached him with the same script but with a few changes on it and this time, the actor agreed to do the project. More details are awaited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X