ಪ್ರಭುದೇವ ಎರಡನೆ ಮದುವೆ ವಿರೋಧಿಸಿ ಪತ್ನಿ ಉಪವಾಸ
ಭಾರತದ ಮೈಕೇಲ್ ಜಾಕ್ಸನ್ ಎಂದೇ ಖ್ಯಾತನಾದನಟ ಪ್ರಭುದೇವ ಎರಡನೆ ಮದುವೆ ನಟಿ ನಯನತಾರಾ ಜೊತೆ ನಡೆಯಲಿದೆ. ಆದರೆ ಈ ಮದುವೆಗೆ ಪ್ರಭುದೇವ ಮೊದಲ ಪತ್ನಿ ರಾಮಲತಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ಆಕೆ ಆಮರಣಾಂತ ಉಪವಾಸ ಕುಳಿತಿದ್ದು ಮದುವೆಯನ್ನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ರಾಮಲತಾ ಅವರೊಂದಿಗೆ ಮಹಿಳಾ ಸಂಘಟನೆಗಳು ಸೇರಿದಂತೆ ಕೆಲವು ವಕೀಲರು ಬೆಂಬಲ ವ್ಯಕ್ತಪಡಿಸಿದ್ದಾರೆ. "ನನ್ನನ್ನು ಮತ್ತ್ತು ಮಕ್ಕಳನ್ನು ಪ್ರಭುದೇವ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಟಿ ನಯನತಾರಾ ಜೊತೆಗೆ ಪ್ರಭುದೇವ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಮಕ್ಕಳನ್ನು ಆತ ಕಡೆಗಣಿಸಿದ್ದಾನೆ" ಎಂದು ಆಕೆ ಆರೋಪಿಸಿದ್ದಾರೆ.
ನಯನತಾರಾ ಜೊತೆಗಿನ ಮದುವೆಯನ್ನು ಕೈಬಿಡುವಂತೆ ಆಗ್ರಹಿಸಿರುವ ರಾಮಲತಾ, ಆತ ಪುನಃ ಮನೆಗೆ ಹಿಂತಿರುಗುವವರೆಗೂ ಆಮರಣಾಂತ ಉಪವಾಸ ಮಾಡುವುದಾಗಿ ಎಚ್ಚರಿಸಿದ್ದಾರೆ. ವಿಷಯ ಹೀಗಿದ್ದರೂ ಪ್ರಭುದೇವ ಮತ್ತು ನಯನತಾರಾ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ.
More from Filmibeat
ನಯನತಾರಾ ಪ್ರಭುದೇವ ಮದುವೆ ಎರಡನೆ ಮದುವೆ ಮೈಸೂರು ರಾಮಲತಾ prabhu deva nayanatara marriage ramalath wedding bells


Click it and Unblock the Notifications











