twitter
    For Quick Alerts
    ALLOW NOTIFICATIONS  
    For Daily Alerts

    'ಪ್ರೇಮಿಸಂ' ಚಿತ್ರಕ್ಕೆ ಕ್ಲೀನ್ ಸೆನ್ಸಾರ್

    By Rajendra
    |

    ಕಲ್ಪನಾಶಕ್ತಿ ಲಾಂಛನದಲ್ಲಿ ನಿರ್ಮಾಣವಾಗಿರುವ 'ಪ್ರೇಮಿಸಂ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು' ಅರ್ಹತಾಪತ್ರವನ್ನು ನೀಡಿದೆ. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಅಜಯ್ ಆರ್ ಗೌಡ ತಿಳಿಸಿದ್ದಾರೆ.

    'ನೆನಪಿರಲಿ' ಖ್ಯಾತಿಯ ರತ್ನಜ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ರಚನೆ ಕೂಡ ಇವರದೆ. ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಶೀತಲ್‌ಜೈನ್ ಅವರ ಛಾಯಾಗ್ರಹಣವಿದೆ. ಚೇತನ್ ಹಾಗೂ ಕೊಡಗಿನ ಹುಡುಗ ನೀರನ್ ಈ ಚಿತ್ರದ ನಾಯಕರು. ಅಮೂಲ್ಯ 'ಪ್ರೇಮಿಸಂ'ನ ನಾಯಕಿ.

    ಹಂಸಲೇಖ ಅವರು ಈ ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸಿದ್ದಾರೆ. ಕೆಂಪರಾಜ್ ಸಂಕಲನ, ಇಮ್ರಾನ್, ದೇವರಾಜ್ ನೃತ್ಯ, ಼ಡಿಫರೆಂಟ್ ಡ್ಯಾನಿ ಸಾಹಸ, ಚಂದ್ರಪ್ಪ ನಿರ್ಮಾಣ ನಿರ್ವಹಣೆ, ರವಿಕುಮಾರ್ ಅವರ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಅನಂತನಾಗ್, ಅವಿನಾಶ್, ರೇಖಾ.ವಿ.ಕುಮಾರ್, ಸಂಗೀತ, ಶೋಭರಾಜ್, ಶರಣ್, ಕುರುಗಳು ಸಾರ್ ಕುರಿಗಳು ಪ್ರಸಾದ್, ಸುನಿತಾ ಮುಂತಾದವರಿದ್ದಾರೆ.

    Tuesday, March 23, 2010, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X