ಉಪ್ಪಿ ನಿರ್ದೇಶನದಲ್ಲಿ ಅಭಿನಯಿಸುವ ಆಸೆ: ಪುನೀತ್

By Rajendra

ಉಪೇಂದ್ರ ನಿರ್ದೇಶನದಲ್ಲಿ ಒಮ್ಮೆಯಾದರೂ ನಟಿಸಬೇಕು ಎಂಬುದು ಹಲವಾರು ಕಲಾವಿದರ ಆಸೆ.ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಹೊರತಲ್ಲ. ಉಪೇಂದ್ರ ನಿರ್ದೇಶನದಲ್ಲಿ ನಟಿಸುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಸಂದರ್ಭ ಸೂಪರ್ ಆಡಿಯೋ ಬಿಡುಗಡೆ ಸಮಾರಂಭ.

ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಸೂಪರ್' ಚಿತ್ರದ ಧ್ವನಿಸುರುಳಿ ಶುಕ್ರವಾರ(ನ.19) ರಾತ್ರಿ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪುನೀತ್ ಮಾತನಾಡುತ್ತಾ, ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಚಿತ್ರಗಳನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಆದರೆ ನಾನೇನು ತಪ್ಪು ಮಾಡಿದ್ದೇನೆ. ನನ್ನ ಚಿತ್ರವನ್ನು ಉಪ್ಪಿ ಏಕೆ ನಿರ್ದೇಶಿಸಲಿಲ್ಲ ಎಂದು ಹಾಸ್ಯಮಿಶ್ರಿತ ಧೋರಣೆಯಲ್ಲಿ ಪ್ರಶ್ನಿಸಿದರು.

ಕನ್ನಡ ಚಿತ್ರರಂಗಕ್ಕೆ ಉಪೇಂದ್ರ ಅತ್ಯುತ್ತಮ ಚಿತ್ರಗಳನ್ನು ಕೊಟ್ಟಿದ್ದಾರೆ. ಅವರ ನಿರ್ದೇಶನದಲ್ಲಿ ಬಂದ 'ತರ್ಲೆ ನನ್ಮಗ', 'ಓಂ', 'ಶ್' ಮತ್ತು 'ಎ' ಚಿತ್ರಗಳನ್ನು ಮರೆಯಲಾಗದು. ಈಗ ಅವರು ನಿರ್ದೇಶಿಸಿ ನಟಿಸಿರುವ 'ಸೂಪರ್' ಚಿತ್ರವನ್ನು ನೋಡಬೇಕೆಂಬ ಕುತೂಹಲ ಉಂಟಾಗಿದೆ. 'ಸೂಪರ್' ಚಿತ್ರ ಯಶಸ್ವಿಯಾಗಲಿ ಎಂದು ಪುನೀತ್ ಹಾರೈಸಿದರು. ಪುನೀತ್ ಅವರ ಮಾತುಗಳನ್ನು ಉಪ್ಪಿ ನಗುನಗುತ್ತಲೇ ಸ್ವಾಗತಿಸಿದರು.

More from Filmibeat

English summary
Power Star Puneeth Rajkumar has expressed his ambition to work under the direction of real star Upendra. He has speaking at the audio release of "Super" (symbol) on Friday (Nov 19) night in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X