ಬೆಂಗಳೂರಿನಿಂದ ಚೆನ್ನೈಗೆ ರಜನಿಕಾಂತ್ ಅಭಿಮಾನಿಗಳು ದೌಡು

By Rajendra

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳಿದ್ದಾರೆ. ರಜನಿ ಆರೋಗ್ಯ ಕೈಕೊಡುತ್ತಿದ್ದಂತೆ ಅವರೆಲ್ಲಾ ಆತಂಕಕ್ಕೊಳಗಾಗಿದ್ದರು.ಪತ್ರಿಕೆಗಳಲ್ಲಿ ರಜನಿ ಆರೋಗ್ಯದ ಬಗ್ಗೆ ದಿನಕ್ಕೊಂದು ಸುದ್ದಿ ಬರುತ್ತಿರುವುದು ಅವರನ್ನು ಮತ್ತಷ್ಟು ಕಂಗೆಡಿಸಿದೆ.

ತಮ್ಮ ನೆಚ್ಚಿನ ನಟನನ್ನು ಸ್ವತಃ ಕಣ್ಣಾರೆ ನೋಡದಿದ್ದರೆ ಅವರಿಗೆ ಏನೋ ಕಳೆದುಕೊಂಡ ಅನುಭವ. ಹಾಗಾಗಿ ಬೆಂಗಳೂರಿನ 200ಕ್ಕೂ ಅಧಿಕ ರಜನಿ ಅಭಿಮಾನಿಗಳು ಚೆನ್ನೈ ರೈಲು ಹತ್ತಿದ್ದಾರೆ. ಅವರೆಲ್ಲಾ ರಜನಿ ಅವರನ್ನು ಭೇಟಿ ಮಾಡಲು ಅವರು ಚಿಕಿತ್ಸೆ ಪಡೆಯುತ್ತಿರುವ ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್‌ಗೆ ಭೇಟಿ ನೀಡರು. ಆದರೆ ಭದ್ರತಾ ಅಧಿಕಾರಿಗಳು ಅವರನ್ನು ಒಳಗೆ ಬಿಟ್ಟಿಲ್ಲ.

ಆದರೂ ಈ ಅಭಿಮಾನಿಗಳು ನಿರಾಶರಾಗದೆ, ರಜನಿ ಬೇಗ ಚೇತರಿಸಿಕೊಳ್ಳಲಿ ಎಂದು ಆಸ್ಪತ್ರೆಗೆ ಕೈಮುಗಿದು ಬೆಂಗಳೂರಿಗೆ ಹಿಂತಿರುಗಿದ್ದಾರೆ. ರಜನಿ ಅವರನ್ನು ತುರ್ತು ನಿಗಾ ಘಟಕದಿಂದ ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆ ಅವರು ಸೂಕ್ತವಾಗಿ ಸ್ಪಂದಿಸುತ್ತಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕವಷ್ಟೆ ಅವರನ್ನು ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
More than 200 fans who worried a lot on their Thalaivar Rajini's health related rumours rushed to Chennai from Bangalore. They stayed opposite to Ramachandra hospital, where the matinee idol taking treatment, but the securities denied entry to them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X