twitter
    For Quick Alerts
    ALLOW NOTIFICATIONS  
    For Daily Alerts

    ಶನಿ ಮಹಾದೇವಪ್ಪ ಸೇರಿ ಮೂವರಿಗೆ ಅಪ್ಪಾಜಿ ಪ್ರಶಸ್ತಿ

    By Prasad
    |

    Shani Mahadevappa
    ಪ್ರತಿವರ್ಷದ ವಾಡಿಕೆಯಂತೆ ಡಾ. ರಾಜ್ ಕುಮಾರ್ ಅವರ ಜನುಮದಿನದ ಪ್ರಯುಕ್ತ ನೀಡಲಾಗುವ 'ಅಪ್ಪಾಜಿ ಸೌಹಾರ್ದ' ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಶನಿ ಮಹಾದೇವಪ್ಪ, ಬೆಂಗಳೂರು ನಾಗೇಶ್ ಮತ್ತು ನೃತ್ಯ ನಿರ್ದೇಶಕಿ ದೇವಿ ಅವರಿಗೆ ನೀಡುವುದಾಗಿ ರಾಜ್ ಕುಟುಂಬ ಪ್ರಕಟಿಸಿದೆ.

    ಈ ಪ್ರಶಸ್ತಿಗಳನ್ನು ಅಪ್ಪಾಜಿ ಏ.23ರಂದು ಲೀ ಮೆರಿಡಿಯನ್ ಹೊಟೇಲಿನಲ್ಲಿ ನಡೆಸಲಾಗುವ ಸರಳ ಸಮಾರಂಭದಲ್ಲಿ ರಾಜ್ ಅವರೊಂದಿಗೆ ಅನೇಕ ವರ್ಷಗಳ ಕಾಲ ಕಲಾವಿದರಾಗಿ ದುಡಿದ ಮೂವರು ಮಹನೀಯರಿಗೆ ಪ್ರಶಸ್ತಿ ನೀಡುತ್ತಿರುವುದಾಗಿ ರಾಜ್ ಅವರ ಎರಡನೇ ಮಗ ರಾಘವೇಂದ್ರ ರಾಜಕುಮಾರ್ ತಿಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ 3 ಗಂಟೆಗೆ ನಡೆಯಲಿದೆ.

    ಹಿರಿಯ ಕಲಾವಿದ ಶನಿ ಮಹಾದೇವಪ್ಪ ಮತ್ತು ಬೆಂಗಳೂರು ನಾಗೇಶ್ ಅವರು ಆರ್ಥಿಕವಾಗಿ ಸಂಕಷ್ಟ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರಕಟವಾಗಿರುವುದು ರಾಜ್ ಆತ್ಮಕ್ಕೆ ಶಾಂತಿ ನೀಡುವಂತಿದೆ. ಶನಿ ಮಹಾದೇವಪ್ಪ ಅವರು ರಾಜ್ ನಟಿಸಿದ್ದ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಡಿಂಡಿಮ ಕವಿಯಾಗಿ ಮನೋಜ್ಞವಾಗಿ ನಟಿಸಿದ್ದರು. ಈ ಚಿತ್ರ ಸೇರಿದಂತೆ ಮಹಾದೇವಪ್ಪ ಅವರು ರಾಜ್ ಜೊತೆ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    ಪ್ರತಿ ವರ್ಷ ರಾಜ್ ಹುಟ್ಟುಹಬ್ಬ(ಏ.24)ದಂದು ಕನ್ನಡ ಚಿತ್ರರಂಗದಲ್ಲಿ ಅವಿರತವಾಗಿ ಶ್ರಮಿಸಿರುವ ಮೂವರು ಅರ್ಹ ಕಲಾವಿದರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ರಾಜ್ ಕುಟುಂಬ ಬೆಳೆಸಿಕೊಂಡು ಬಂದಿದೆ. ಕಳೆದ ವರ್ಷ ನಿರ್ದೇಶಕ ಭಗವಾಗನ್, ನಟಿ ಶಾಂತಮ್ಮ ಮತ್ತು ನಟ ಶಿವರಾಂ ಅವರಿಗೆ ನೀಡಲಾಗಿತ್ತು. ಪ್ರಶಸ್ತಿ 1 ಲಕ್ಷ ರು., ಪ್ರಶಸ್ತಿ ಫಲಕ ಮತ್ತು ಶಾಲನ್ನು ಒಳಗೊಂಡಿರುತ್ತದೆ.

    English summary
    Actors Shani Mahadevappa, Bengaluru Nagesh and dance director Devi have been chosen for Appaji Souharda award by Raj family. The deserving artists will be presented with the award on Rajkumar's 83rd birthday on April 24, 2011 in Bangalore.
    Saturday, April 23, 2011, 13:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X