ಸಾಗರ್ ಚಿತ್ರಮಂದಿರದಲ್ಲಿ ಬಾಯ್‌ಫ್ರೆಂಡ್ ಜೊತೆ ರಮ್ಯಾ
ತನ್ನ ಬಾಯ್‌ಫ್ರೆಂಡ್ ರಾಫೆಲ್ ಜೊತೆ ಗೋಲ್ಡನ್ ಗರ್ಲ್ ರಮ್ಯಾ 'ಮದುವೆ' ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಅಯ್ಯೋ ಅದ್ಯಾವ ಮದುವೆ ಸಿನಿಮಾನಪ್ಪಾ ಎಂದು ಹುಬ್ಬೇರಿಸಬೇಡಿ. ಅದು ಇನ್ಯಾವುದೂ ಅಲ್ಲ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್ ಗೀತಾ' ಚಿತ್ರ.ಅಂದಹಾಗೆ ಸಂಜು ಚಿತ್ರ ಅರ್ಧ ಶತಕ ಬಾರಿಸಿದೆ.
ರೊಮ್ಯಾಂಟಿಕ್ ಸಕ್ಸಸ್ ಕಂಡಿರುವ ಈ ಚಿತ್ರವನ್ನು ರಮ್ಯಾ ತನ್ನ ಬಾಯ್‌ಫ್ರೆಂಡ್ ಜೊತೆ ಕೂತು ಸವಿದಿರುವುದು ವಿಶೇಷ. ಮೆಜೆಸ್ಟಿಕ್‌ನ ಸಾಗರ್ ಚಿತ್ರಮಂದಿರದಲ್ಲಿ ಶನಿವಾರ ರಾತ್ರಿ ರಮ್ಯಾ ಮತ್ತು ರಾಫೆಲ್ ಈ ಚಿತ್ರವನ್ನು ಕಣ್ಣು ತುಂಬಿಕೊಂಡಿದ್ದಾರೆ.ಚಿತ್ರಮಂದಿರದಿಂದ ರಮ್ಯಾ ಹೊರಬರುತ್ತಿದ್ದಂತೆ, ಅಭಿಮಾನಿಗಳುಅವರ ಕೈಕುಲುಕಿದರು ಸೂಪರ್ ಆಗಿ ಅಭಿನಯಿಸಿದ್ದೀರಾ ಮೇಡಂ ಎಂದು ಕೊಂಡಾಡಿದರು.
ಅಂದಹಾಗೆ ರಾಫೆಲ್‌ಗೆ ಕನ್ನಡ ಬರಲ್ಲ. ರಮ್ಯಾ ಅವರೆ ಚಿತ್ರದ ಸನ್ನಿವೇಶಗಳನ್ನು ತನ್ನ ಬಾಯ್‌ಫ್ರೆಂಡ್‌ಗೆ ಸವಿವರವಾಗಿ ತಿಳಿಸಿದ್ದಾರೆ. ಮುಂದಿನ ವರ್ಷ ಇವರಿಬ್ಬರೂ ದಾಂಪತ್ಯಕ್ಕೆ ಅಡಿಯಿಡಲಿದ್ದು, ಬಳಿಕ ರಮ್ಯಾ ತನ್ನ ಜೊತೆಗಾರ ಜೊತೆ ಸ್ವಿಟ್ಜರ್‌ಲ್ಯಾಂಡ್‌ಗೆ ಹಾರಲಿದ್ದಾರೆ ಎನ್ನುತ್ತವೆ ಮೂಲಗಳು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











