For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ರಿಯಲ್ ಸ್ಟಾರ್ ವೆಲ್ಕಂ ಮಾಡಿ: ರಮ್ಯಾ

  By Mahesh
  |

  ಸಾಮಾಜಿಕ ಜಾಲ ತಾಣ ಟ್ವಿಟರ್ ನ ಹುಚ್ಚು ಹತ್ತಿಸಿಕೊಂಡಿರುವ ದಿವ್ಯಸ್ಪಂದನ ಅಲಿಯಾಸ್ ರಮ್ಯಾ ಮೇಡಂ ಈಗ ಈ ವೈರಸ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಹಾಕಿದ್ದಾರೆ. ಇದರಿಂದ ಉತ್ತೇಜನಗೊಂಡ ಉಪ್ಪಿ ತಮ್ಮ ಟ್ವಿಟ್ಟರ್ ಖಾತೆಗೆ ಮರು ಚಾಲನೆ ನೀಡಿದ್ದಾರೆ.

  ಶಾರುಖ್ ಖಾನ್, ನರೇಂದ್ರ ಮೋದಿ, ಸಚಿನ್, ಬಿಬಿಸಿ, ಸಿಎನ್ ಎನ್ ಅಲ್ಲದೆ ನಾಸಾ ಟ್ವಿಟ್ಟರ್ ಫಾಲೋ ಮಾಡುತ್ತಿರುವ ಉಪೇಂದ್ರ, ತಮ್ಮ ಪತ್ನಿ ಪ್ರಿಯಾಂಕಾ ಅಕೌಂಟ್ ಹಿಂಬಾಲಕರೂ ಹೌದು.

  ಸದ್ಯಕ್ಕೆ ಈ ಸಮಯಕ್ಕೆ(250+) ಹಿಂಬಾಲಕರನ್ನು ಹೊಂದಿರುವ ರಿಯಲ್ ಸ್ಟಾರ್ ಉಪ್ಪಿಯನ್ನು ಟ್ವೀಟ್ ಲೋಕಕ್ಕೆ ಸ್ವಾಗತಿಸಿ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

  ಚತುರ ನಿರ್ದೇಶಕ ಉಪ್ಪಿ ಕೂಡಾ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಾ ಕಠಾರಿ ವೀರದ ಗೆಟೆಪ್ ಚಿತ್ರಗಳು, ಚಿತ್ರೀಕರಣ ಸಮಯದ ಕ್ಲಿಪ್ಪಿಂಗ್ ಗಳನ್ನು ಹರಿಯಬಿಟ್ಟಿದ್ದಾರೆ. ಉಪ್ಪಿ ಕ್ರೇಜ್ ನಿಧಾನಗತಿಯಿಂದ ಏರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉಪ್ಪಿ ಅಕೌಂಟ್ (@realupendra)ಹಿಂಬಾಲಿಸುವ ನಿರೀಕ್ಷೆಯಿದೆ.

  English summary
  Actress Divyaspandana aka Ramya confirms Real Star Upendra's realupendra twitter account is genuine. Upendra is still learning the art of tweeting and accepting followers but craze is increasing on Social networking sites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X