For Quick Alerts
  ALLOW NOTIFICATIONS  
  For Daily Alerts

  ರವಿ ಶ್ರೀವತ್ಸರೊಂದಿಗೆ 'ಹ್ಯಾಟ್ರಿಕ್ ಹೀರೋ' ಮತ್ತೆ ಫಿಕ್ಸ್

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶಿವಣ್ಣ ಕೈಗೆ ಮಚ್ಚು ನೀಡಿ ತೆರೆಮೇಲೆ ರೌಡಿಗಳ ತಲೆಗಳನ್ನು ಚೆಂಡಾಡಿಸಿದ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ತೆರೆಯ ಮೇಲೆ ರಕ್ತದೋಕುಳಿ ನಡೆಸಿದ್ದ ಶಿವಣ್ಣ ಮುಖ್ಯ ಭೂಮಿಕೆಯಲ್ಲಿದ್ದ 'ಮಾದೇಶ' ಚಿತ್ರವನ್ನು ರವಿ ಶ್ರೀವತ್ಸ ಈ ಹಿಂದೆ ನಿರ್ದೇಶಿಸಿದ್ದರು.

  ಅತಿಯಾದ ಹಿಂಸಾಚಾರವೇನೋ ತಿಳಿಯದು "ಹೋದಪುಟ್ಟ ಬಂದಪುಟ್ಟ" ಎನ್ನುವ ಹಾಗೆ 'ಮಾದೇಶ' ಚಿತ್ರ ಒಂದುವಾರ ಚಿತ್ರಮಂದಿರದಲ್ಲಿ ನಿಲ್ಲಲು ತಡಕಾಡಿದ್ದು ದುರಂತ. ಇದೀಗ ಈ ಜೋಡಿ ಮತ್ತೆ ಒಂದಾಗಿದೆ. ಶಿವರಾಜ್ ಕುಮಾರ್ ಅವರನ್ನು ಹಾಕಿಕೊಂಡು 'ಬಂಧುಬಳಗ' ಎನ್ನುವ ಇನ್ನೊಂದು ಫ್ಲಾಪ್ ಚಿತ್ರವನ್ನು ನಿರ್ಮಿಸಿದ್ದ ಸೂರಪ್ಪ ಬಾಬ್ ಈ ಚಿತ್ರಕ್ಕೆ ಹಣ ಸುರಿಯಲಿದ್ದಾರೆ.

  ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

  ಸೂರಪ್ಪಬಾಬು ನಿರ್ಮಿಸಿದ್ದ ಕೊನೆ ಚಿತ್ರ ಪುನೀತ್ ಅಭಿನಯದ 'ಪೃಥ್ವಿ' ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡ ನಂತರ ಸೂರಪ್ಪ ಸದ್ಯ ಬಚಾವ್ ಆಗಿದ್ದಾರೆ. ಈ ಚಿತ್ರಕ್ಕೆ ಮಹೂರ್ತ ಬರುವ ಜನವರಿ 30 ರಂದು ಎಂದು ನಿರ್ದೇಶಕ ರವಿ ಶ್ರೀವತ್ಸ ತಿಳಿಸಿದ್ದಾರೆ. [ಶಿವರಾಜ್ ಕುಮಾರ್]

  English summary
  Hat Trick Hero Shivarajkumar new flick announced. Ravi Srivathsa to direct the movie, previously he directed Madesha movie for Shivarajkumar. The new movie is producing by Soorappa Babu. The Cast and Crew of the movie yet to be finalised.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X