ಸಂಜನಾ ಜೊತೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್
ಕವಿರಾಜ್ ರಚಿಸಿರುವ ''ಕೆಂಪು ಬಸ್ಸು ಹತ್ತಿಕೊಂಡು ಹಣೆಗೆ ಕುಂಕುಮ ಇಟ್ಟುಕೊಂಡು ಬಂದಾನೊ ಬೋರೇಗೌಡ ಬೆಂಗಳೂರಿಗೆ..." ಎಂಬ ಗೀತೆಗೆ ಸಂಜನಾ ಅವರೊಂದಿಗೆ ನಾಯಕ ಶಿವರಾಜಕುಮಾರ್ ಹೆಜ್ಜೆ ಹಾಕಿದರು. ಅಂಥೊಣಿ ಪ್ರದೀಪ್ ನೃತ್ಯ ಸಂಯೋಜಿಸಿದ ಈ ಗೀತೆಯ ಚಿತ್ರೀಕರಣದಲ್ಲಿ ಸಹ ನರ್ತಕರು ಭಾಗವಹಿಸಿದ್ದರು.
ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀನಿವಾಸ್ ಅವರು ಅರ್ಪಿಸಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ 'ಮೈಲಾರಿ' ಚಿತ್ರದ ಹಾಡೊಂದು ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣಗೊಂಡಿದೆ.ಆರ್.ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆಯಿರುವ 'ಮೈಲಾರಿ'ಗೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ.
ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜ್‌ಕುಮಾರ್, ಸದಾ, ರವಿಕಾಳೆ, ರಂಗಾಯಣರಘು, ಸಂಜನಾ, ಸುರೇಶ್‌ಹುಬ್ಳಿಕರ್, ಗುರುಪ್ರಸಾದ್(ಮಠ), ಜಾನ್‌ಕೊಕೇನ್, ಸುರೇಶ್‌ಮಂಗಳೂರು, ರಾಜುತಾಳಿಕೋಟೆ, ಬುಲೆಟ್‌ಪ್ರಕಾಶ್, ಮೈಕೋನಾಗರಾಜ್, ಕುರಿ ಪ್ರತಾಪ್, ರಘುರಾಂ, ಕೋಟೆಪ್ರಭಾಕರ್, ವಿಶ್ವ ಮುಂತಾದವರಿದ್ದಾರೆ.


Click it and Unblock the Notifications











