ಹೃದಯ ಹೃದಯಗಳ ಸ್ನೇಹಸೇತು ರಾಮ್ ಸೇತು
ಆರ್.ಡಿ.ಜೆ ಫಿಲಂಸ್ ಲಾಂಛನದಲ್ಲಿ ಶ್ರೀದೇವಿ ರಾಮ್‌ರೆಡ್ಡಿ ನಿರ್ಮಿಸುತ್ತಿರುವ 'ರಾಮ್ ಸೇತು' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸ್ನೇಹಿತ ಸೇತುವನ್ನು ಕೊಂದಿದ್ದ ರಾಜಕಾರಣಿ ಭಂಡಾರಿಯನ್ನು ನಾಯಕ ರಾಮ್ ಕೊಂದು ಹಾಕುವ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಮೈಸೂರಿನ ಜಲದರ್ಶನಿಯಲ್ಲಿ ಚಿತ್ರಿಸಿಕೊಳ್ಳುವ ಮೂಲಕ ನಿರ್ದೇಶಕ ಬಿ.ಎಂ.ಪಿ ಅಣ್ಣಯ್ಯ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳ್ಳಿಸಿದ್ದಾರೆ.
ಸೂರ್ಯಕಾಂತ್, ರಮೇಶ್ ಪಂಡಿತ್, ಧರ್ಮ, ಸಂಗೀತ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಮಂಗಳೂರು, ಉಡುಪಿ, ಮಲ್ಪೆ ಹಾಗೂ ಕಾಪು ಸಮುದ್ರ ತೀರ, ಇನ್ನೋವೆಟಿವ್ ಫಿಲಂ ಸಿಟಿ, ಮೈಸೂರು, ಶ್ರೀರಂಗಪಟ್ಟಣ ಹಾಗೂ ಬಲಮುರಿ ಫಾಲ್ಸ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೃಪಾಕರ್ ಅವರ ಸಂಗೀತವಿದೆ.
ಗೌರಿವೆಂಕಟೇಶ್ ಮತ್ತು ಸುರೇಶ್‌ಬಾಬು ಛಾಯಾಗ್ರಹಣ, ಕೌರವವೆಂಕಟೇಶ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಲೀಲಾಮನೋಹರ್ ಅವರ ನಿರ್ಮಾಣ ನಿರ್ವಹಣೆಯಿದೆ. ಈ ಚಿತ್ರದ ತಾರಾಬಳಗದಲ್ಲಿ ಸೂರ್ಯಕಾಂತ್, ಧರ್ಮ, ಸಂಗೀತ, ರಮೇಶ್ ಪಂಡಿತ್, ಮೋಹನ್ ಜುನೇಜಾ, ಆರ್.ಡಿ.ಜೆ, ಮೈಸೂರು ಶ್ರೀಕಂಠು ಮುಂತಾದವರಿದ್ದಾರೆ.


Click it and Unblock the Notifications











