ಆರಕ್ಷಕದಲ್ಲಿ ಉಪೇಂದ್ರ ಮಾನಸಿಕ ರೋಗಿಯೇ?
ಇದೇ ಗುರುವಾರ, 26 ಜನವರಿ 2012ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಆರಕ್ಷಕ ಚಿತ್ರದ ಪೋಸ್ಟರ್ ಗಳು ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರಣ ಸೂಪರ್ ಸ್ಟಾರ್ ಉಪೆಂದ್ರ ಇಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿರವುದು ಒಂದು. ಹುಚ್ಚನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು.
ಉಪೇಂದ್ರ ಈ ಚಿತ್ರದಲ್ಲಿ ಮಾನಸಿಕ ರೋಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಪ್ರೇಕ್ಷಕರ ತಲೆಯೊಳಗೆ ಸುತ್ತುತ್ತಿದೆ. ಕಾರಣ ಮತ್ತದೇ ಪೋಸ್ಟರ್. ಅಂದರೆ ಆಪ್ತಮಿತ್ರದ ಸೌಂದರ್ಯ ಅವರಂತೆ ಉಪ್ಪಿ ವಿಶಿಷ್ಠ ಪಾತ್ರ ಪೋಷಿಸಿರಬಹುದು, ಕಥೆಯೂ ರೋಚಕವಾಗಿರಬಹುದು ಎನ್ನಲಾಗುತ್ತಿದೆ.
ನಿರ್ದೆಶಕ ಪಿ ವಾಸು ಅವರನ್ನು ಕೇಳಿದರೆ ಹೆಚ್ಚು ಮಾತನಾಡದೇ ಉಪ್ಪಿ ಕಡೆ ಕೈ ತೋರಿಸುತ್ತಾರೆ. ಉಪೇಂದ್ರ ಮಾತನ್ನೇ ಆಡದೇ ನಗುತ್ತಾ ಚಿತ್ರ ನೋಡಿ ಎಂದು ಕಾಗೆ ಹಾರಿಸಿದ್ದಾರೆ. ಪ್ರೇಕ್ಷಕರಿಗೆ ಮಾತ್ರ ಚಿತ್ರ ಬಿಡುಗಡೆಗಿಂತ ಮೊದಲೇ ತಿಳಿದುಕೊಳ್ಳುವ ಹಂಬಲ. ಆದರೆ ಗುಟ್ಟು ರಟ್ಟಾಗುತ್ತಿಲ್ಲ, ಜನ ಬಿಡುತ್ತಿಲ್ಲ. ಮುಂದಿನ ಪುಟ ನೋಡಿ...
More from Filmibeat
English summary
One doubt arise that Super Star Upendra acted as Mentally ill Patient Role in the movie Arakshaka?


Click it and Unblock the Notifications











