For Quick Alerts
  ALLOW NOTIFICATIONS  
  For Daily Alerts

  ರಾಜ್ಯಾದ್ಯಂತ 'ಆರಕ್ಷಕ'ನ ಹೌಸ್ ಫುಲ್ ಪ್ರದರ್ಶನ

  |

  ನಿನ್ನೆ ಗುರುವಾರ , ಜನವರಿ 26, 2012ರಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ 'ಆರಕ್ಷಕ' ಚಿತ್ರ ಎಲ್ಲಾ ಕಡೆ 'ಹೌಸ್ ಫುಲ್' ಪ್ರದರ್ಶನ ಕಾಣುತ್ತಿವೆ. ಉಪೇಂದ್ರ ಚಿತ್ರವಾದ್ದರಿಂದ ಬಿಡುಗಡೆಗೂ ಮೊದಲು ಸ್ವಲ್ಪ ನಿರೀಕ್ಷೆ ಸಹಜವಾಗಿಯೇ ಇತ್ತು. ಈಗ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬರುತ್ತದೆ.

  ಸೂಪರ್ ಸ್ಟಾರ್ ಉಪೆಂದ್ರ, ಆರಕ್ಷಕ ಚಿತ್ರದಲ್ಲಿ ಮೂರು 'ಶೇಡ್' ಇರುವ ಪಾತ್ರದಲ್ಲಿ ಅಭಿನಯಿಸಿರುವುದು ಜನರನ್ನು ಮರುಳು ಮಾಡಿದೆ. ಹಾಲಿವುಡ್ ಸ್ಪೂರ್ತಿಯ ಕಥೆಯಾದರೂ ಕನ್ನಡಕ್ಕೆ ಹೊಸತರದ ಕಥೆಯಾದ್ದರಿಂದ ಜನರಿಗೆ ವಿಭಿನ್ನ ಹಾಗೂ ಚೆನ್ನ ಅನಿಸಿದೆ. ಹೀಗಾಗಿ ಉಪೇಂದ್ರ, ಪಿ ವಾಸು ಹಾಗೂ ಕೃಷ್ಣಪ್ರಜ್ವಲ್ ಅಂಡ್ ಖುಷ್.

  ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದಂತೆ ಮತ್ತೂ ಅಲರ್ಟ್ ಆಗಿರುವ ಚಿತ್ರತಂಡ ಇನ್ನೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆಸುತ್ತಿದೆ. ಮಾತುಕತೆ ಯಶಸ್ವಿಯಾದರೆ ಆರಕ್ಷಕ ರಾಜ್ಯದಾದ್ಯಂತ ಇನ್ನೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಸದ್ಯದಲ್ಲೇ ಬಾಕ್ಸ್ ಆಫೀಸ್ ವರದಿ ಬರಲಿದೆ. (ಒನ್ ಇಂಡಿಯಾ ಕನ್ನಡ)

  English summary
  Super Star Upendra's movie Arakshaka is Houseful Screening in all over Karnataka. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X