twitter
    For Quick Alerts
    ALLOW NOTIFICATIONS  
    For Daily Alerts

    ಗೆದ್ದವನೇ ಜಾಣ: 2011 'ಸಾರಥಿ' ದಿ ವಿನ್ನರ್

    |

    Darshan Sarathi
    ಜುಲೈ ತಿಂಗಳಿಂದ ಡಿಸೆಂಬರ್ 2011 (as on 23.12.11) ರ ಅವಧಿಯಲ್ಲಿ 48 ಚಿತ್ರಗಳು ಬಿಡುಗಡೆಗೊಂಡಿವೆ. ಇದರಲ್ಲಿ 10 ಚಿತ್ರಗಳು ಉತ್ತಮ ಪ್ರದರ್ಶನ ಕಂಡರೆ ಉಳಿದ ಚಿತ್ರಗಳು ಹೋದ ಪುಟ್ಟ ಬಂದ ಪುಟ್ಟ ಎನ್ನುವ ಹಾಗೆ ಥಿಯೇಟರ್ ನಿಂದ ಹೀಗೆ ಬಂದು ಹಾಗೆ ಖಾಲಿಯಾಗಿ ಬಿಟ್ಟಿವೆ.

    ಈ ಆರು ತಿಂಗಳ ಅವಧಿಯಲ್ಲಿ ಗಾಂಧಿನಗರ ಬೆಕ್ಕಸ ಬೆರಗಾಗುವಂತೆ ಅಕ್ಷರಶಃ ಗಲ್ಲಾ ಪೆಟ್ಟಿಗೆ ಲೂಠಿ ಹೊಡೆದಿದ್ದು ದರ್ಶನ್ ಅಭಿನಯದ ಸಾರಥಿ. ಅದು ಬಿಕೆಟಿ ಇರಲಿ, ಹೈದರಾಬಾದ್ ಕರ್ನಾಟಕ ವಿರಲಿ, ಕರಾವಳಿ ಕರ್ನಾಟಕ ವಿರಲಿ ಎಲ್ಲಾ ಭಾಗದಲ್ಲೂ ಸಾರಥಿ ಬಾಕ್ಸ್ ಆಫೀಸ್ ನಲ್ಲಿ ತನ್ನ ಛಾಪು ಮೂಡಿಸಿತು.

    ಬ್ಲಾಕ್ ಬಸ್ಟರ್ ಚಿತ್ರ
    ಸಾರಥಿ : ದರ್ಶನ್ ತೂಗುದೀಪ್, ದೀಪಾ ಸನ್ನಿಧಿ, ಶರತ್ ಕುಮಾರ್ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ದರ್ಶನ್ ಸಹೋದರ್ ದಿನಕರ್ ತೂಗುದೀಪ್ ನಿರ್ದೇಶಿಸಿದ್ದರು. ಹರಿಕೃಷ್ಣ ಸಂಗೀತದ ಈ ಚಿತ್ರದ ಪ್ರಮುಖ ಆಕರ್ಷಣೆಯಲ್ಲೊಂದು ರವಿವರ್ಮಾ ಅವರ ಮೈನವಿರೇಳಿಸುವ ಸಾಹಸ ದೃಶ್ಯಗಳು.

    ಹಿಟ್ ಚಿತ್ರಗಳು
    1. ಪರಮಾತ್ಮ : ಕನ್ನಡ ಚಿತ್ರರಂಗದ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಪುನೀತ್ ರಾಜಕುಮಾರ್, ದೀಪಾ ಸನ್ನಿಧಿ, ರಂಗಾಯಣ ರಘು ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ಕನ್ನಡದ ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶಿಸಿದ್ದರು. ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಚಿತ್ರ ಹಿಟ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಯಿತು.

    2. ವಿಷ್ಣುವರ್ಧನ : ಚಿತ್ರದ ಮಹೂರ್ತದಿಂದ ಬಿಡುಗಡೆಯವರೆಗೂ ಒಂದಲ್ಲೊಂದು ಮುಖ್ಯವಾಗಿ ಟೈಟಲ್ ಸಂಬಂಧ ವಿವಾದಕ್ಕೆ ಒಳಗಾಗಿದ್ದ ಚಿತ್ರ. ದ್ವಾರಕೀಶ್ ಬ್ಯಾನರ್ ನಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಸುದೀಪ್, ಭಾವನಾ, ಅರುಣ್ ಸಾಗರ್, ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿದ್ದರು. ವಿ ಕುಮಾರ್ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಈ ಲೇಖನ ಅಪ್ಲೋಡ್ ಆಗುವರೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    3. ಶೈಲೂ: ಗೋಲ್ದರ್ ಸ್ಟಾರ್ ಗಣೇಶ್ ಗೆ ಒಂದು ರೀತಿಯಲ್ಲಿ ಮರುಜೀವನ ಕಲ್ಪಿಸಿದ ಸಿನಿಮಾ ಇದೆಂದರೆ ತಪ್ಪಾಗಲಾರದು. ಸಾಲು ಸಾಲು ಚಿತ್ರಗಳು ತೋಪೆದ್ದು ಹೋಗಿದ್ದಾಗ ಮರುಭೂಮಿಯಲ್ಲಿ ನೀರು ಸಿಕ್ಕಷ್ಟು ಸಂತೃಪ್ತ ರಾಗಿದ್ದಾರೆ ಗಣೇಶ್. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ಜಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಈ ಚಿತ್ರ ರಾಜ್ಯಾದ್ಯಂತ ತುಂಬಿದ ಪ್ರದರ್ಶನ ಕಾಣುತ್ತಿದೆ.

    ಎವರೇಜ್ ಹಿಟ್ ಚಿತ್ರಗಳು

    1. ಕೃಷ್ಣನ್ ಮ್ಯಾರೇಜ್ ಸ್ಟೋರಿ (ಅಜಯ್ ರಾವ್, ನಿಧಿ ಸುಬ್ಬಯ್ಯ, ನಿರ್ದೇಶನ ನೂತನ್ ಉಮೇಶ್)
    2. ವಿನಾಯಕ ಗೆಳೆಯರ ಬಳಗ ( ವಿಜಯ್ ರಾಘವೇಂದ್ರ, ನವೀನ ಕೃಷ್ಣ, ನಿರ್ದೇಶನ ನಾಗೇಂದ್ರ ಪ್ರಸಾದ್)
    3. ಭದ್ರ ( ಪ್ರಜ್ವಲ್ ದೇವರಾಜ್, ಡೈಸಿ ಶಾ, ನಿರ್ದೇಶನ ಮಹೇಶ್ ರಾವ್)
    4. 90 ಹೊಡಿ ಪಲ್ಟಿ ಹೊಡಿ ( ಸಾಧು ಕೋಕಿಲ, ರಂಗಾಯಣ ರಘು, ನಿರ್ದೇಶನ ಲಕ್ಕಿ ಶಂಕರ್)
    5. ಲೈಫು ಇಷ್ಟೇನೆ (ದಿಗಂತ್, ಸಂಯುಕ್ತ ಹೊರನಾಡು, ನಿರ್ದೇಶನ ಪವನ್ ಕುಮಾರ್)
    6. ಕಳ್ಳ ಮಳ್ಳ ಸುಳ್ಳ (ರವಿಚಂದ್ರನ್, ರಮೇಶ್, ವಿಜಯ್ ರಾಘವೇಂದ್ರ, ರಾಗಿಣಿ, ನಿರ್ದೇಶನ ಉದಯ್ ಪ್ರಕಾಶ್)

    Last but not least, 2011 ರಲ್ಲಿ ನಮ್ಮ ಚಿತ್ರರಂಗ ಕಂಡ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅವು ಯಾವುದೆಂದರೆ ಕೆಂಪೇಗೌಡ, ಹುಡುಗ್ರು ಮತ್ತು ಸಾರಥಿ ಚಿತ್ರದಲ್ಲಿ ಕೊನೆಗೆ ವಿಜಯದ ನಗೆ ಬೀರಿದ್ದು ಅನುಮಾನವೇ ಇಲ್ಲದೆ ಅದು ಅತಿರಥ ಮಹಾರಥಿ "ಸಾರಥಿ"

    ಗಮನಿಸಬೇಕಾದ ಅಂಶವೇನೆಂದರೆ ಈ ಪಟ್ಟಿ ಮಾಧ್ಯಮದಲ್ಲಿ ಬಂದ ವರದಿಗಳು, ಚಿತ್ರತಂಡ ನೀಡಿದ ಪತ್ರಿಕಾ ಹೇಳಿಕೆ, ಬಾಯಿ ಇಂದ ಬಾಯಿಗೆ ಹರಡಿದ ಸುದ್ದಿಗಳು ಮತ್ತು ನಮ್ಮ ಪತ್ರಿಕಾ ವರದಿಗಾರರು ನೀಡಿದ ವರದಿ ಆಧರಿಸಿ ಬರೆಯಲಾಗಿದೆ.

    English summary
    From July to December 2011 Kannada film industries has done fairly good performance in the box office. There are 1 Block buster and 3 hit movies during these period. At the end of 2011, out of 3 block buster movies i.e. Kempegowda, hudugru and Sarathi, Darshan' s Sarathi emerged highest grosser.
    Friday, December 23, 2011, 16:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X