ಅವಳಿ ಜವಳಿ ಕಂದಮ್ಮಗಳ ನಿರೀಕ್ಷೆಯಲ್ಲಿ ಐಶ್ವರ್ಯ ರೈ!
ಬಾಲಿವುಡ್ ತಾರೆ ಐಶ್ವರ್ಯ ರೈ ಗರ್ಭಿಣಿ ಎಂಬ ಸುದ್ದಿ ಸ್ಫೋಟಗೊಂಡಿದ್ದೆ ತಡ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಅಭಿಮಾನದ ಸುರಿಮಳೆಯಾಗಿದೆ. ಈಗ ಐಶ್ವರ್ಯ ರೈಗೆ ಗಂಡು ಮಗುವೋ ಹೆಣ್ಣು ಮಗುವೋ ಎಂಬ ಜಿಜ್ಞಾಸೆ ಅಭಿಮಾನಿ ವಲಯದಲ್ಲಿ ಮೂಡಿದೆ.
ಆದರೆ ಈ ಸುದ್ದಿಯನ್ನು ಮೀರಿಸುವಂತಹ ಸುದ್ದಿಯೊಂದನ್ನು ಜ್ಯೋತಿಷಿಯೊಬ್ಬರು ನೀಡಿದ್ದಾರೆ. ಐಶ್ವರ್ಯ ರೈ ಅವರ ಜಾತಕವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕವಡೆ ಹಾಕಿ ಗ್ರಹ ನಕ್ಷತ್ರಗಳನ್ನು ಲೆಕ್ಕಾಚಾರ ಮಾಡಿ ಐಶುಗೆ ಅವಳಿ ಜವಳಿ ಯೋಗ ಇದೆ ಎಂದು ಭಾವಿಕ್ ಸಾಂಘ್ವಿ ಎಂಬ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
ಐಶ್ವರ್ಯ ರೈ ಇದೇ ವರ್ಷ ಗರ್ಭಿಣಿ ಆಗುತ್ತಾರೆ ಎಂದು ಈ ಜ್ಯೋತಿಷಿ ಕಳೆದ ವರ್ಷ ಭವಿಷ್ಯ ನುಡಿದಿದ್ದರಂತೆ. ಅದು ಬಹುತೇಕ ನಿಜವೂ ಆಗಿದೆ. ಆತ ಹೇಳುವುದೇನೆಂದರೆ, ಅವಳಿ ಜವಳಿ ಮಕ್ಕಳಂತೂ ಗ್ಯಾರಂಟಿ. ಒಂದು ವೇಳೆ ಅವಳಿ ಜವಳಿ ಇಲ್ಲ ಎಂದರೆ ಹೆಣ್ಣು ಮಗುವಂತೂ ಖಂಡಿತ. ಆದರೆ ಗಂಡು ಮಗು ಯೋಗ ಇಲ್ಲ ಎಂದಿದ್ದಾರೆ. ನೋಡೋಣ ಏನಾಗುತ್ತದೋ!? (ಏಜೆನ್ಸೀಸ್)
More from Filmibeat
English summary
In all probability, Aishwarya Rai and Abhishek's child will be a baby girl. Also don't be surprised if they have duplets. "I had already predicted way back in November 2010, that Aishwarya Rai would embrace 'motherhood' in 2011", claims Bhavikk Sangghvi.
ಐಶ್ವರ್ಯ ರೈ ಗರ್ಭಿಣಿ ಜ್ಯೋತಿಷ್ಯ ಭವಿಷ್ಯ ಮಗು ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ aishwarya rai pregnant astrology abhishek bachchan amitab bachchan big b


Click it and Unblock the Notifications











