»   » 'ಬುದ್ಧಿವಂತ' ಉಪೇಂದ್ರರನ್ನು ಒಪ್ಪಿಕೊಂಡವರು ದಡ್ದರಲ್ಲ!

'ಬುದ್ಧಿವಂತ' ಉಪೇಂದ್ರರನ್ನು ಒಪ್ಪಿಕೊಂಡವರು ದಡ್ದರಲ್ಲ!

Subscribe to Filmibeat Kannada

ಇದುವೆರೆಗೂ ಉಪೇಂದ್ರ ನಟಿಸಿದ ಚಿತ್ರಗಳಲ್ಲಿ 'ಬುದ್ಧಿವಂತ' ವಿಭಿನ್ನ ಚಿತ್ರ.ಜೊತೆಗೆ ಚಿತ್ರವಿಚಿತ್ರ ವೇಷಭೂಷಣಗಳಲ್ಲಿ ಉಪೇಂದ್ರ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಐವರು ನಟಿಯರೊಂದಿಗೆ (ಪೂಜಾಗಾಂಧಿ, ನೇಥನ್ಯಾ, ಸಲೋನಿ, ಸುಮನ್ ರಂಗನಾಥ್ ಹಾಗೂ ಬೃಂದಾ) ಸಿದ್ಧವಾಗಿರುವ 'ಬುದ್ಧಿವಂತ' ಜೂನ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಭೂಲೋಕದ ಸ್ವರ್ಗ ಕಾಶ್ಮೀರ ಹಾಗೂ ಚೀನಾದ ಸುಂದರ ಪರಿಸರಗಳಲ್ಲಿ ಚಿತ್ರೀಕರಣಗೊಂಡು ಈಗಾಗಲೇ ಡಿಟಿಎಸ್ ಕೆಲಸವನ್ನೂ ಮುಗಿಸಿಕೊಂಡಿದೆ. ಚಿತ್ರದ ಚಿತ್ರೀಕರಣ ಯಾವುದೇ ಜಂಜಾಟವಿಲ್ಲದೆ ಸುಸೂತ್ರವಾಗಿ ಸಾಗಿತು ಎನ್ನ್ನುತ್ತಾರೆ ನಿರ್ದೇಶಕ ರಾಮನಾಥ್ ಋಗ್ವೇದಿ.

''ಇಂದಿನ ಪ್ರೇಕ್ಷಕ ತುಂಬಾ ಬುದ್ಧಿವಂತ ಕಣ್ರಿ! ಹಾಗಾಗಿ ಚಿತ್ರದ ತೆರೆಮೇಲೆ ನಾನು ತುಂಬಾ ಬುದ್ಧಿವಂತನಾಗಿ ಕಾಣಿಸುತ್ತೇನೆ'' ಎನ್ನುತ್ತಾರೆ ನಟ ಉಪೇಂದ್ರ ''ಚಿತ್ರದ ಐದು ಹಾಡುಗಳನ್ನು ಐದು ವಿಭಿನ್ನ ಸೆಟ್‌ಗಳಲ್ಲಿ ಚಿ ತ್ರೀಕರಿಸಿದ್ದೇವೆ. ಬಾಲಿವುಡ್ ಚಿತ್ರದ ಗುಣಮಟ್ಟಕ್ಕೆ ತಕ್ಕಂತೆ ಬುದ್ಧಿವಂತ ತೆರೆಗೆ ಬರುತ್ತಿವೆ'' ಎನ್ನುತ್ತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ರಾಜೇಂದ್ರ ಸಿಂಗ್ ಬಾಬು.

ಕನ್ನಡ ಚಿತ್ರರಂಗದಲ್ಲಿ ಹೊಸ ಶೈಲಿಗೆ ನಾಂದಿ ಹಾಡಲಿದೆ ನಮ್ಮ 'ಬುದ್ಧಿವಂತ'. ಸಂಭಾಷಣೆ ಹಾಗೂ ದೃಶ್ಯಗಳೂ ಒಂದಕ್ಕೊಂದು ಹೇಗೆ ಮಿಳಿತವಾಗಿವೆ ಎಂದರೆ ಅದನ್ನು ತೆರೆಯ ಮೇಲೇ ನೋಡಿ ಆನಂದಿಸಬೇಕು! ಲೈಟ್‌ಬಾಯ್‌ನಿಂದ ಹಿಡಿದು ನಿರ್ದೇಶಕರ ತನಕ ಪ್ರತಿಯೊಬ್ಬರೂ ಬೆವರು ಸುರಿಸಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ನಿರ್ಮಾಪಕ ಮೋಹನ್.

''ನಟ ಉಪೇಂದ್ರ ಕೇವಲ ನಿರ್ದೇಶಕರ ನಟನಷ್ಟೇ ಅಲ್ಲ ; ನಿರ್ದೇಶಕರ ನಿರ್ದೇಶಕ ಹಾಗೂ ನಿರ್ಮಾಪಕರ ನಟ'' ಎಂಬ ರಾಜೇಂದ್ರಸಿಂಗ್ ಬಾಬು ಅವರ ಮಾತಿನಲ್ಲಿ ಎಷ್ಟು ಜೊಳ್ಳೋ ಎಷ್ಟು ಹುರುಳೋ ಚಿತ್ರ ಬಿಡುಗಡೆಯಾದ ಮೇಲೆ ತಿಳಿಯಲಿದೆ.
ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada