»   » ಭಟ್ಟರ ಡ್ರಾಮಾ ಮುಂದಕ್ಕೆ ಹೋಗಲು ಯಾರು ಕಾರಣ?

ಭಟ್ಟರ ಡ್ರಾಮಾ ಮುಂದಕ್ಕೆ ಹೋಗಲು ಯಾರು ಕಾರಣ?

Posted By:
Subscribe to Filmibeat Kannada
Yograj Bha Yash
ಯೋಗರಾಜ್ ಭಟ್ಟರ 'ಡ್ರಾಮಾ' ಚಿತ್ರವು ಈಗಾಗಲೇ ಮುಹೂರ್ತ ಮುಗಿಸಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿದೆ. ಹೀಗಾಗಲು ಕಾರಣವೇನು? ಸುದ್ದಿ ಮೂಲಗಳ ಪ್ರಕಾರ ಕಾರಣಗಳು ಎರಡು. ಒಂದು, ನಾಯಕ ಯಶ್ ಹಾಗೂ ನಾಯಕಿ ರಾಧಿಕಾ ಪಂಡಿತ್. ಇನ್ನೊಂದು ಕಾರಣ, ಸ್ವತಃ ಯೋಗರಾಜ್ ಭಟ್.

ಅದ್ಹೇಗೆ ಎಂದರೆ, ಡ್ರಾಮಾದಲ್ಲಿ ನಟಿಸಬೇಕಾದ ನಾಯಕ ಯಶ್, ಲಕ್ಕಿ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ರಾಧಿಕಾ ಪಂಡಿತ್, ರಾಮು ಎಂಟರ್ ಪ್ರೈಸಸ್ ಚಿತ್ರ 'ಸಾಗರ್' ಚಿತ್ರೀಕರಣದಲ್ಲಿ ಬ್ಯುಸಿ. ಹೀಗಾಗಿ ಇಬ್ಬರದೂ ಡೇಟ್ಸ್ ಪ್ರಾಬ್ಲಂ. ಸತತ ಚಿತ್ರೀಕರಣ ಮಾಡುವದಕ್ಕೆ ಇಬ್ಬರೂ ಸದ್ಯಕ್ಕೆ ಲಭ್ಯರಿಲ್ಲ.

ಇನ್ನು ಸ್ವತಃ ಯೋಗರಾಜ್ ಭಟ್ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ಸಮೀಪದ ಬಂಧುವೊಬ್ಬರ ಅನಾರೋಗ್ಯ ಭಟ್ಟರು ಅವರನ್ನು ಬಿಟ್ಟು ಆಚೀಚೆ ಕದಲದಂತೆ ಹಿಡಿದಿಟ್ಟಿತ್ತು. ಹಾಗಾಗಿ ಭಟ್ಟರಿಗೆ ಬದಲಾದ ಸ್ಕ್ರಿಪ್ಟ್ ಗೆ ಹೊಸ ರೂಪ ಕೊಡಲು ಸಾಧ್ಯವಾಗಿಲ್ಲ. ಇದೀಗ ಪ್ರೀ ಪ್ರೊಡಕ್ಷನ್ ಪ್ಲಾನ್ ಸಲುವಾಗಿ ಚೆನ್ನೈನಲ್ಲಿರುವ ಭಟ್ಟರು ಸದ್ಯದಲ್ಲಿಯೇ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಹೀಗಾಗಿ, ಡ್ರಾಮಾ ಚಿತ್ರ ನಿರ್ಮಿಸಲಿರುವ ಜಯಣ್ಣ ಹಾಗೂ ಭಟ್ಟರು ಕೂತು ಚರ್ಚಿಸಿ ಮುಹೂರ್ತ ನಿಗದಿಪಡಿಸಬೇಕಾಗಿದೆ. ನಾಳೆ, ನಾಡಿದ್ದರಲ್ಲಿ ಭಟ್ಟರು ಹಾಗೂ ಜಯಣ್ಣ ಮಾತುಕತೆ ನಡೆಸಲಿದ್ದಾರೆ. ಮಾರ್ಚ್ ಮೊದಲ ವಾರ ಚಿತ್ರೀಕರಣ ಶುರುವಾಗಲಿದೆ. ಅಷ್ಟರೊಳಗೆ ಮುಹೂರ್ತ ನಡೆಯಬೇಕಿದೆ. ಹಾಗಾಗಿ ಸದ್ಯದಲ್ಲಿಯೇ ಮುಹೂರ್ತ ಘೋಷಣೆಯಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Yograj Bhat movie Drama will start shooting from next month, march, 2012. Because of hero yash and heroine date problem, it delayed. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X