»   » ಅಂತರ್ಜಾಲದಲ್ಲಿ ‘ಮಾಲ್ಗುಡಿ ಡೇಸ್‌’ ಹಾಗೂ ‘ಫೌಜಿ’!

ಅಂತರ್ಜಾಲದಲ್ಲಿ ‘ಮಾಲ್ಗುಡಿ ಡೇಸ್‌’ ಹಾಗೂ ‘ಫೌಜಿ’!

Posted By: Super
Subscribe to Filmibeat Kannada

ಮುಂಬಯಿ : ಖ್ಯಾತ ಲೇಖಕ ಅರ್‌.ಕೆ. ನಾರಾಯಣ್‌ ಅವರ 'ಮಾಲ್ಗುಡಿ ಡೇಸ್‌" ಕೃತಿಯನ್ನು ಅಂದು ಕಿರುತೆರೆಗೆ ಶಂಕರ್‌ನಾಗ್‌ ಅಳವಡಿಸಿದ್ದು ಎಲ್ಲರಿಗೂ ಗೊತ್ತು. ಇಂದು ಅಂತರ್ಜಾಲದಲ್ಲಿ 'ಮಾಲ್ಗುಡಿ ಡೇಸ್‌" ಲಭ್ಯ.

ಅಂತರ್ಜಾಲ ತಾಣದ ಮೂಲಕ ಸಿನಿಮಾ ಹಾಗೂ ಧಾರಾವಾಹಿಗಳನ್ನು ವೀಕ್ಷಕರಿಗೆ ನೀಡಲು ಮುಂದಾಗಿರುವ ರಾಜಶ್ರೀ ಸಂಸ್ಥೆ , ಈಗ ಮಾಲ್ಗುಡಿ ಡೇಸ್‌ ಹಾಗೂ ಶಾರುಖ್‌ ಖಾನ್‌ ಅಭಿನಯದ 'ಫೌಜಿ" ಧಾರಾವಾಹಿಯನ್ನು ಅಂತರ್ಜಾಲದಲ್ಲಿ ಒದಗಿಸುತ್ತಿದೆ.

ವಿವಿಧ ಕಂತುಗಳಲ್ಲಿ ಪ್ರಸಾರವಾಗುವ ಈ ಧಾರಾವಾಹಿಗಳನ್ನು ನೋಡಲು ಕನಿಷ್ಠವೆಂದರೂ 90 ರೂ. ಪಾವತಿಸಬೇಕು. ಹಣ ಪಾವತಿ ಮಾಡಿ ಅಂದಿನ ಭಾಗವನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ಈ ಹಿಂದೆ ಮಹಾಭಾರತ ಧಾರಾವಾಹಿಯನ್ನು ಈ ರೀತಿ ನೀಡಿ, ರಾಜಶ್ರೀ ಸಂಸ್ಥೆ ಯಶಸ್ಸು ಪಡೆದಿತ್ತು.
(ಏಜನ್ಸೀಸ್‌)

English summary
Popular serials like Malgudi days and Fauji are made available on website by Rajashri company. People can either watch or download the available episodes by paying small amount.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada