»   » ವಿಷ್ಣು ‘ಭಾವಶಿಲ್ಪಿ’, ಉಪ್ಪಿ ಶ್ರೇಷ್ಠನಟ

ವಿಷ್ಣು ‘ಭಾವಶಿಲ್ಪಿ’, ಉಪ್ಪಿ ಶ್ರೇಷ್ಠನಟ

Posted By: Staff
Subscribe to Filmibeat Kannada
Vishnuvardhan
ಸಾಹಸಸಿಂಹ ವಿಷ್ಣುವರ್ಧನ್‌ ಈಗ ಭಾವಶಿಲ್ಪಿ !
'ಕದಂಬ" ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಭಾವಪೂರ್ಣ ಅಭಿನಯ ನೋಡಿ ಈ ಬಿರುದು ಕೊಟ್ಟರಾ ? ಗೊತ್ತಿಲ್ಲ . ಆದರೆ, ಕಲಾವಿದರಾಗಿ ವಿಷ್ಣು ಪಕ್ವವಾಗುತ್ತಿರುವ ಸಂದರ್ಭದಲ್ಲಿ 'ಭಾವಶಿಲ್ಪಿ" ಬಿರುದು ಅವರಿಗೆ ಅನ್ವರ್ಥ. ಬಿರುದು ಕೊಟ್ಟವರು ಅಭಿಮಾನಿಗಳಲ್ಲ - ಪತ್ರಿಕೆ. 'ಹಲೋ ಗಾಂಧಿನಗರ್‌" ಸಿನಿಮಾ ಪತ್ರಿಕೆ.

ಹಲೋ ಗಾಂಧಿನಗರ್‌ ಸಿನಿ ಮಾಸ ಪತ್ರಿಕೆ ಕಳೆದ ಶುಕ್ರವಾರ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ , ಕನ್ನಡ ಚಿತ್ರರಂಗದ 2003ರ ಶ್ರೇಷ್ಠರನ್ನು ಗುರ್ತಿಸಿ ಗೌರವಿಸುವ ಅಪರೂಪದ ಸಮಾರಂಭ ಹಮ್ಮಿಕೊಂಡಿತ್ತು . ಕಳೆದ ವರ್ಷ ಕೂಡ ಗಾಂಧಿನಗರ ಪತ್ರಿಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತ್ತು . ಈ ಬಾರಿಯದು ಚೊಕ್ಕ ಸಮಾರಂಭ, ಚಿಕ್ಕ ಸಮಾರಂಭ. ಪತ್ರಿಕೆಯ ಸಂಪಾದಕ ನಂದಕುಮಾರ್‌ ಹಾಗೂ ಅವರ ಶ್ರೀಮತಿ ವರಲಕ್ಷ್ಮಿ ಕೈವಾಡ ಕಾರ್ಯಕ್ರಮದ ಯಶಸ್ಸಿನಲ್ಲಿ ಎದ್ದುಕಾಣುತ್ತಿತ್ತು .

2003ರ 'ಹಲೋ ಗಾಂಧಿನಗರ್‌" ಪ್ರಶಸ್ತಿಗಳನ್ನು ಪಡೆದ ಪ್ರಮುಖರು :

ಅತ್ಯುತ್ತಮ ನಟ : ಉಪೇಂದ್ರ (ರಕ್ತ ಕಣ್ಣೀರು)
ಅತ್ಯುತ್ತಮ ನಟಿ : ಅಭಿರಾಮಿ (ಲಾಲಿಹಾಡು)
ಅತ್ಯುತ್ತಮ ನಿರ್ದೇಶಕ : ಎಸ್‌.ನಾರಾಯಣ್‌ (ಚಂದ್ರಚಕೋರಿ)
ಉದಯೋನ್ಮುಖ ನಟ : ಮುರಳಿ (ಚಂದ್ರ ಚಕೋರಿ)
ಉದಯೋನ್ಮುಖ ನಟಿ : ರಮ್ಯ (ಅಭಿ ಮತ್ತು ಎಕ್ಸ್‌ಕ್ಯೂಸ್‌ ಮಿ)
ವಿಶೇಷ ಪ್ರಶಸ್ತಿಗಳು : ಶಿವರಾಜ್‌ಕುಮಾರ್‌ (ಚಿಗುರಿದ ಕನಸು), ದರ್ಶನ್‌ (ನಮ್ಮ ಪ್ರೀತಿಯ ರಾಮು) ಮತ್ತು ಸುದೀಪ್‌ (ಸ್ವಾತಿಮುತ್ತು ).

ರೆಬೆಲ್‌ ಸ್ಟಾರ್‌ ಅಂಬರೀಷ್‌ ಮತ್ತು ಜಯಂತಿ ಅವರಿನ್ನು ಸಮಗ್ರ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಷ್ಣುವರ್ಧನ್‌ ಅವರಿಗೆ 'ಭಾವಶಿಲ್ಪಿ" ಬಿರುದು ನೀಡಿ ಗೌರವಿಸಲಾಯಿತು. ಫಲಪುಷ್ಪ , ಶಾಲು, ಕೃಷ್ಣನ ಪ್ರತಿಮೆ ಹಾಗೂ ಬೆಳ್ಳಿಯ ಕಿರೀಟ ತೊಡಿಸಿ ವಿಷ್ಣುವರ್ಧನ್‌ ಅವರನ್ನು ಸನ್ಮಾನಿಸಿದಾಗ ಅಭಿಮಾನಿಗಳಿಂದ ಭಾರ ಕರತಾಡನ.

ಅಭಿನಂದನೆಗೆ ಪ್ರತಿಕ್ರಿಯಿಸಿದ ವಿಷ್ಣುವರ್ಧನ್‌- ತಮ್ಮೆಲ್ಲ ಸಾಧನೆಯ ದೇವರು ಹಾಗೂ ಅಭಿಮಾನಿಗಳ ಅನುಗ್ರಹ ಎಂದರು. 'ಭಾವಶಿಲ್ಪಿ" ಬಿರುದು ತಮ್ಮ ಭುಜಗಳಿಗೆ ಭಾರವಾಗುತ್ತಿದೆ ಎಂದು ವಿನೀತಭಾವದಿಂದ ನುಡಿದರು.

English summary
Hello Gandhinagar awards2003 : Upendra is Best Actor, Abhirami is Best Actress. Vishnuvardhan feliciated with 'Bhava Shilpi' award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada