»   » ‘ಗೋಲ್ಡೀ’ ವಿಜಯ್‌ ಆನಂದ್‌ ನಿಧನ

‘ಗೋಲ್ಡೀ’ ವಿಜಯ್‌ ಆನಂದ್‌ ನಿಧನ

Posted By: Staff
Subscribe to Filmibeat Kannada

ಮುಂಬಯಿ : ಹಿಂದಿ ಚಿತ್ರರಂಗದಲ್ಲಿ 'ಗೋಲ್ಡೀ" ಎಂದು ಜನಪ್ರಿಯರಾಗಿದ್ದ ಹಿರಿಯ ನಿರ್ದೇಶಕ ಹಾಗೂ ನಟ ವಿಜಯ್‌ ಆನಂದ್‌ ಫೆ.23ರ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು . ಫಾಲ್ಕೆ ಪ್ರಶಸ್ತಿ ವಿಜೇತ ದೇವಾನಂದ್‌, ವಿಜಯ್‌ ಆನಂದ್‌ರ ಸೋದರ.

ಶನಿವಾರ ಹೃದಯಾಘಾತಕ್ಕೆ ತುತ್ತಾಗಿದ್ದ ವಿಜಯ್‌ ಆನಂದ್‌ ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯಬೇನೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಅವರು, ಸೋಮವಾರ ಬೆಳಗ್ಗೆ 6ರ ಸುಮಾರಿಗೆ ನಿಧನ ಹೊಂದಿದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪತ್ನಿ ಸುಷ್ಮಾ ಮತ್ತು ಪುತ್ರ ವೈಭವ್‌ರನ್ನು ವಿಜಯ್‌ ಅಗಲಿದ್ದಾರೆ.

'ಜಾನಿ ಮೇರಾ ನಾಮ್‌" ಮತ್ತು 'ಜ್ಯುವೆಲ್‌ ಥೀಫ್‌" ಚಿತ್ರಗಳು ವಿಜಯ್‌ ಆನಂದ್‌ಗೆ ನಿರ್ದೇಶಕರಾಗಿ ಪ್ರಚಂಡ ಜನಪ್ರಿಯತೆ ತಂದುಕೊಟ್ಟಿದ್ದವು. ಅವರ ನಟನೆಯ 'ಹಕೀಕತ್‌", 'ಕಲಾ ಬಜಾರ್‌" ಚಿತ್ರಗಳು ಜನರ ಮೆಚ್ಚುಗೆ ಗಳಿಸಿದ್ದವು.

'ನೌ ದೋ ಗ್ಯಾರಹ್‌" ಚಿತ್ರದ ಮೂಲಕ ವೃತ್ತಿ ಜೀವನ ಶುರು ಮಾಡಿದ ವಿಜಯ್‌ ಆನಂದ್‌ ನಂತರದ ದಿನಗಳಲ್ಲಿ ನಿರ್ದೇಶಕರಾಗಿಯೂ ಮನ್ನಣೆ ಗಳಿಸಿದ್ದರು. 'ಕಲಾ ಬಜಾರ್‌", 'ತೇರೆ ಘರ್‌ ಕೇ ಸಾಮ್ನೆ", 'ಗೈಡ್‌", 'ತೀಸ್‌ರಿ ಮಂರಿkುಲ್‌", 'ಜ್ಯುವೆಲ್‌ ಥೀಫ್‌", 'ಕಹಿನ್‌ ಔರ್‌ ಚಲ್‌" , 'ಜಾನಿ ಮೇರೆ ನಾಮ್‌", 'ತೇರೆ ಮೇರೆ ಸಪ್ನೆ" , 'ಬ್ಲಾಕ್‌ಮೇಲ್‌", 'ಬುಲೆಟ್‌", 'ರಾಂ ಬಲರಾಂ", 'ರಜಪೂತ್‌", 'ಚುಪ್ಪಾ ರುಸ್ತುಂ" ಹಾಗೂ 'ಷರೀಫ್‌ ಬದ್ಮಾಷ್‌" ವಿಜಯ್‌ ಆನಂದ್‌ರ ನಿರ್ದೇಶನದ ಚಿತ್ರಗಳಲ್ಲಿ ಸೇರಿವೆ.

ವಿಜಯ್‌ ನಿರ್ದೇಶನದ 'ಜಾನಿ ಮೇರೆ ನಾಮ್‌" ಬಾಲಿವುಡ್‌ನ ಸಾರ್ವಕಾಲಿಕ ಯಶಸ್ವಿ ಚಿತ್ರಗಳಲ್ಲಿ ಒಂದೆನಿಸಿದೆ. ಅವರ ಇತ್ತೀಚಿನ ಚಿತ್ರ 'ಜನಾ ನ ದಿಲ್‌ ಸೆ ದೂರ್‌" ಚಿತ್ರ ಇನ್ನೂ ತೆರೆ ಕಾಣಬೇಕಾಗಿದೆ.

ಕಿರುತೆರೆಯಲ್ಲೂ ಆಸಕ್ತಿ ಹೊಂದಿದ್ದ ವಿಜಯ್‌ ಆನಂದ್‌, 'ಲಮ್ಹಾಸ್‌" ಎನ್ನುವ ಚಾನಲ್‌ ಆರಂಭಿಸಲು ಉದ್ದೇಶಿಸಿದ್ದರು.

(ಏಜನ್ಸೀಸ್‌)

ಮುಖಪುಟ / ಸ್ಯಾಂಡಲ್‌ವುಡ್‌

English summary
Vijay Anand passes away
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada