»   » ಐಶ್ವರ್ಯ ರೈಗೆ ಚುಂಬನದ ಅಲರ್ಜಿ..!

ಐಶ್ವರ್ಯ ರೈಗೆ ಚುಂಬನದ ಅಲರ್ಜಿ..!

Subscribe to Filmibeat Kannada

ಜೇಮ್ಸ್‌ ಬಾಂಡ್‌ ನಿರ್ಮಾಪಕರುಗಳಿಗೆ ಅವರ ಚಿತ್ರಗಳಲ್ಲಿ ಜಗತ್ತಿನ ಅತಿ ಸುಂದರ ಯುವತಿಯೇ ಬೇಕೆಂದರೆ ಅವರು ಗಾಢ ಚುಂಬನ ಅಥವಾ ದೀರ್ಘ ಚುಂಬನದ ದೃಶ್ಯಗಳಿಗೆ ಬಾಯ್‌ ಅನ್ನಲೇಬೇಕು ಎಂಬುದು ಬಾಂಡ್‌ ಬೆಡಗಿ ಐಶ್ವರ್ಯ ರೈಯ ಅಭಿಪ್ರಾಯ.

ಇದೆಲ್ಲವೂ ಸ್ಕಿೃಪ್ಟ್‌ಗೆ ಸಂಬಂಧಿಸಿದ್ದು. ಅದಿದ್ದಂತೆ ಮಾಡುವೆ. ಭಾರತೀಯ ಮಹಿಳೆ ಬಾಂಡ್‌ ಚಿತ್ರಗಳಲ್ಲಿ ಮಾಡಲು ಒಪ್ಪಿದ್ದಾಳೆಂದರೆ ಆಕೆ ತನ್ನ ಸಂಸ್ಕೃತಿಯನ್ನು ಮೀರಿರುವಳಂತಲ್ಲ. ಹಾಗೆಂದು ಚುಂಬನದ ದೃಶ್ಯಕ್ಕೆ ಮಾತ್ರ ನಾನು ಏಕ ಧ್ರುವ ಚುಂಬಕ ಎನ್ನುತ್ತಿದ್ದಾಳೆ ರೈ. ಹ್ಯಾಟ್ಸ್‌ ಆಫ್‌ ಐಶೂ..

ಭಾರತೀಯ ಮಹಿಳೆಯ ಸ್ಥಾನ ಎಂತಹದು ಎಂದು ಜಗತ್ತಿಗೇ ತಿಳಿದಂತಾಗಲಿ. ಇಲ್ಲಿ ಹೆಣ್ಣಿಗೆ ತೋರಿಸುವ ಗೌರವ, ಪಾವಿತ್ರ್ಯ ಇತರರಿಗೆ ಮಾದರಿುೂಂಗಲಿ. ಭಾರತೀಯ ಚಿತ್ರರಂಗ ಒಂದು ವರ್ಷದಲ್ಲಿ 800 ಚಿತ್ರಗಳನ್ನು ತಯಾರಿಸುತ್ತದೆ ಮತ್ತು ವಾರವೊಂದರಲ್ಲೇ ಮಿಲಿಯ ಗಟ್ಟಲೆ ಟಿಕೆಟ್‌ ಮಾರಾಟವಾಗುತ್ತದೆ. ಇದು ಭಾರತೀಯ ಚಿತ್ರೋದ್ಯಮಕ್ಕೂ ಒಂದು ಗುಣಮಟ್ಟ ಇದೆ ಎನ್ನುವುದಕ್ಕೆ ಸೂಕ್ತ ನಿದರ್ಶನ ಎಂದು ರೈ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಿಗೆ ಸಿಕ್ಕಾಗ ತನ್ನ ಅಭಿಪ್ರಾಯ ವ್ಯಕ್ತಪಡಿಸಿದಳು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada