»   » ಸರಕಾರಿ ನೌಕರರಿಗೆ ನಟಿಸಲು ಬಿಡಿ...

ಸರಕಾರಿ ನೌಕರರಿಗೆ ನಟಿಸಲು ಬಿಡಿ...

Posted By: Super
Subscribe to Filmibeat Kannada

ಬೆಂಗಳೂರು : ಸರಕಾರಿ ಅಧಿಕಾರಿಗಳು ಮತ್ತು ನೌಕರರು ಚಲನಚಿತ್ರ ಹಾಗೂ ಕಿರುತೆರೆ ಧಾರವಾಹಿಗಳಲ್ಲಿ ನಟಿಸಬಾರದು ಎಂಬ ರಾಜ್ಯ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಐಎಎಸ್‌ ಅಧಿಕಾರಿಯಾಗಿರುವ ಚಿತ್ರನಟ ಶಿವರಾಮು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಗೇಮು ಚಿತ್ರದ ನಾಯಕ ಶಿವರಾಮು ಸದ್ಯಕ್ಕೆ 'ತಾಕತ್‌; ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸರಕಾರಿ ಸೇವೆಯಲ್ಲಿ ್ಲ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದಾರೆ. ಇವರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಹೈಕೋರ್ಟ್‌ ನ್ಯಾಯಾಧೀಶ ಆರ್‌. ಗುರುರಾಜನ್‌ ಅವರು ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಲು ಆದೇಶಿಸಿದ್ದಾರೆ.

ಸರಕಾರದ ನಿಯಮ ಅನುಸಾರವೆ ನನಗೆ ರಜೆ ಪಡೆಯಲು ಅಧಿಕಾರವಿದೆ. ಈ ಹಿಂದೆ ಆರು ಚಿತ್ರಗಳಲ್ಲಿ ಕಾನೂನಿನ ಪರಿಧಿ ಮೀರದೆ ನಟಿಸಿದ್ದೇನೆ. ಮುಂದೆ ನಟಿಸಲು ಹಾಗೂ ಸದ್ಯದ ಚಿತ್ರ ಪೂರ್ಣಗೊಳಿಸಲು ಮಾ.8ರಂದು ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.

English summary
Actor Shivaram approaches HC against Govt order

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada