»   » ಕಡೆಗೂ ಕವಿಯ ಕೈಹಿಡಿದಳು ಅಪರ್ಣ!

ಕಡೆಗೂ ಕವಿಯ ಕೈಹಿಡಿದಳು ಅಪರ್ಣ!

Subscribe to Filmibeat Kannada

ಬೆಂಗಳೂರು : ಚಲನಚಿತ್ರ ನಟಿ, ಕಿರುತೆರೆ ಕಲಾವಿದೆ ಮತ್ತು ನಿರೂಪಕಿ ಅಪರ್ಣಾ ಬುಧವಾರ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ಅಪರ್ಣ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಪ್ರಸ್ತುತ ಈ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ಯಾವಜನ್ಮದ ಮೈತ್ರಿ ಮತ್ತು ‘ಮುಕ್ತ ’ಧಾರವಾಹಿಯ ಶೀಲಾ ಪ್ರಸಾದ್‌ ಪಾತ್ರದ ಮೂಲಕ ಅಪರ್ಣ ಜನಪ್ರಿಯರಾಗಿದ್ದಾರೆ.

ಪುಟ್ಟಣ್ಣ ಕಣಗಾಲ್‌ ಅವರ ಫಮಸಣದ ಹೂವುಫ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು. ಚಿತ್ರಬದುಕಿನ ನಡುವೆಯೇ ದೂರದರ್ಶನ ಸೇರಿಕೊಂಡ ಅಪರ್ಣ ಜನಪ್ರಿಯ ನಿರೂಪಕಿ ಎಂದು ಗುರ್ತಿಸಲ್ಪಟ್ಟಿದ್ದಾರೆ.

ತಮ್ಮ ವಿಶಿಷ್ಟ ಧ್ವನಿ ಮತ್ತು ಸ್ಪಷ್ಟ ಉಚ್ಚಾರದಿಂದ ಬೇಡಿಕೆಯ ನಿರೂಪಕಿಯಾಗಿರುವ ಅಪರ್ಣ ಅವರ ತಂದೆ ಕೆ. ಎಸ್‌.ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು. ಪ್ರಸ್ತುತ ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕದಲ್ಲಿ ಅಂಕಣಗಾರ್ತಿಯಾಗಿದ್ದಾರೆ.

ಮತ್ತೆ ದಾಂಪತ್ಯವನ್ನು ಪ್ರವೇಶಿಸಿರುವ ಅಪರ್ಣ ಬದುಕು ಹಸಿರಾಗಿರಲಿ ಎನ್ನುವ ಹಾರೈಕೆ ಎಲ್ಲರದು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada