»   » ರಾಮ್‌ಕುಮಾರ್‌-ಸುಧಾರಾಣಿಗೆ ‘ಅಭಿನಂದನೆ’

ರಾಮ್‌ಕುಮಾರ್‌-ಸುಧಾರಾಣಿಗೆ ‘ಅಭಿನಂದನೆ’

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
‘ವಂದನೇ...ವಂದನೆ...’ ಹಾಡಿನ ರಾಮ್‌ಕುಮಾರ್‌ ಎನ್ನುವ ಚಾಕಲೇಟ್‌ ಹೀರೋ ಎಲ್ಲಿಗೆ ಹೋದ ಎನ್ನುವಾಗಲೇ, ಸ್ಯಾಂಡಲ್‌ವುಡ್‌ನಲ್ಲಿ ಮರುಹುಟ್ಟು ಪಡೆಯಲು ಮತ್ತೆ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ಒಲಿದಿರುವುದು ಪೋಷಕ ಪಾತ್ರ! ಅವರಿಗೆ ಜೋಡಿಯಾಗಿದ್ದಾರೆ ಸುಧಾರಾಣಿ.

ರಾಮ್‌ಕುಮಾರ್‌ ಅಭಿನಯದ ‘ಅಭಿನಂದನೆ’ ಎನ್ನುವ ಹೊಸ ಚಿತ್ರ ಸೋಮವಾರ ನಗರದ ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿದೆ. ತೆಲುಗು ನಿರ್ಮಾಪಕ ಪ್ರೇಂಕುಮಾರ್‌ ತಮ್ಮ ಪತ್ನಿ ಸವಿತಾರ ಹೆಸರಿನಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಅಭಿನಂದನೆ ಚಿತ್ರವನ್ನು ರಾಮಚಂದ್ರರಾವ್‌ ನಿರ್ದೇಶಿಸುತ್ತಿದ್ದಾರೆ. ಬೊಂಬಾಟ್‌ ಹೆಂಡ್ತಿ, ದೋಣಿ ಸಾಗಲಿ ಮತ್ತಿತರ ಚಿತ್ರಗಳನ್ನು ನಿರ್ದೇಶಿಸಿದ್ದ ರಾಮಚಂದ್ರರಾವ್‌ ಅವರಿಗೂ ರಾಮ್‌ಕುಮಾರ್‌ರಂತೆಯೇ ಇದು ಮರುಹುಟ್ಟಿನ ಪ್ರಯತ್ನವೆಂದರೆ ಅತಿಶಯವೇನಿಲ್ಲ.

ಚಿತ್ರದ ನಾಯಕ-ನಾಯಕಿಯಾಗಿ ಯಶವಂತ್‌ ಮತ್ತು ಅನು ಈ ಚಿತ್ರದ ಮೂಲಕ ಚಿತ್ರಬದುಕನ್ನು ಆರಂಭಿಸುತ್ತಿದ್ದಾರೆ. ಹೆಸರಾಂತ ನಟಿ ಅಂಜಲಿ ದೇವಿಯವರ ಮೊಮ್ಮಗಳಾಗಿರುವ ಅನು ಹುಟ್ಟಿದ್ದು ಹಾಗೂ ಬೆಳೆದದ್ದು ಅಮೇರಿಕದಲ್ಲಾದರೂ, ಭಾರತೀಯ ಸಂಸ್ಕೃತಿಯ ಕುಚಿಪುಡಿ ಹಾಗೂ ಭರತನಾಟ್ಯದಲ್ಲಿ ನಿಪುಣತೆ ಸಾಧಿಸಿದ್ದಾರೆ.

ಚಿತ್ರದ ಸಂಭಾಷಣೆ ಹೊಣೆಯನ್ನು ಬಿ.ಎ. ಮಧು, ಸಂಗೀತದ ಹೊಣೆಯನ್ನು ಕೆ.ಕಲ್ಯಾಣ ಅವರು ಹೊತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada