ಆಸ್ಕರ್ ಪ್ರಶಸ್ತಿ ನೇರಪ್ರಸಾರ ಸೋಮವಾರ ಬೆಳಗ್ಗೆ 6.30ಕ್ಕೆ
ಅನೇಕರ ಪ್ರಶ್ನೆಗಳು- ಆಸ್ಕರ್ ಫಂಕ್ಷನ್ ನಡೆಯೋದು ಎಲ್ಲಿ? ಎಷ್ಟು ಹೊತ್ತಿಗೆ? ಅದನ್ನು ಟಿವಿಯ ಯಾವ ಚಾನೆಲ್ಲಿನಲ್ಲಿ ನೋಡುವುದು?
ಉತ್ತರ ಇಲ್ಲಿದೆ, ಓದಿ...
ನಮ್ಮ (ಐಎಸ್‌ಟಿ ) ಕಾಲಮಾನದ ಪ್ರಕಾರ ಮಾರ್ಚ್ 25ರ ಸೋಮವಾರ ಬೆಳಗ್ಗೆ 6.30ಕ್ಕೇ ಟಿವಿ ಮುಂದೆ ಕೂರಬೇಕು. ಸ್ಟಾರ್ ಮೂವೀಸ್ ಚಾನೆಲ್‌ನಲ್ಲಿ ನೇರ ಪ್ರಸಾರವಿದೆ. ಲಗಾನ್ ಸಿನಿಮಾಗೆ ಆಸ್ಕರ್ ಸಲ್ಲುವುದೋ ಇಲ್ಲವೋ- ಅಂದು ಗೊತ್ತಾಗಲಿದೆ.
ಈ ಬಾರಿ ಆಸ್ಕರ್ ಸಮಾರಂಭ ನಡೆಯುತ್ತಿರುವುದು ಹಾಲಿವುಡ್‌ನಲ್ಲಿ. ಹೊಸ ಪ್ರಕಾರದ ಕೊಡ್ಯಾಕ್ ಸ್ಟುಡಿಯೋದಲ್ಲಿ ರಂಗುರಂಗಿನ ಕಾರ್ಯಕ್ರಮಗಳ ನಡುವೆ ತಾಸುಗಳ ಕಾಲ ರಂಜನೆ. ನಡುನಡುವೆ ಸಿನಿಮಾ ಪ್ರತಿಭಾವಂತರಿಗೆ ಸಲ್ಲಲಿರುವ ಆಸ್ಕರ್ ಪುರಸ್ಕಾರವನ್ನು ಕಣ್ಣ ತುಂಬಿಸಿಕೊಳ್ಳುವ ಅವಕಾಶ.
ಈ ಹಿಂದೆ ಹಾಲಿವುಡ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು 1960ರಲ್ಲಿ . ಅಂದಹಾಗೆ, ಮೊದಲ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದದ್ದು ಕೂಡ ಇದೇ ಜಾಗದಲ್ಲಿ, 1928ರಲ್ಲಿ. ಆ ಕಾರ್ಯಕ್ರಮ ಹದಿನೈದೇ ನಿಮಿಷ ಕಾಲ ನಡೆದಿತ್ತು. ಈಗ ಆಸ್ಕರ್ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಿನಿಮಾ ಪ್ರತಿಭೆಗೆ ಸಲ್ಲುವ ಅತ್ಯುತ್ಕೃಷ್ಟ ಪುರಸ್ಕಾರವಿದು. ಲಗಾನ್ ಕ್ರಿಕೆಟ್ ತಂಡಕ್ಕೆ ಇಲ್ಲಿ ಜಯ ಸಲ್ಲುವುದೇ?


Click it and Unblock the Notifications