»   » ರಾಜ್‌ಗೆ ಬರ್ತ್‌ಡೇ ಗಿಫ್ಟ್‌ : ಅಪ್ಪನಾದ ಅಪ್ಪು

ರಾಜ್‌ಗೆ ಬರ್ತ್‌ಡೇ ಗಿಫ್ಟ್‌ : ಅಪ್ಪನಾದ ಅಪ್ಪು

Subscribe to Filmibeat Kannada

‘ಅಪ್ಪು’ ಅಪ್ಪ ಆಗಿದ್ದಾರೆ !

ಬಹು ನಿರೀಕ್ಷೆಯ‘ಅಭಿ’ ಚಿತ್ರ ಬಿಡುಗಡೆಗೆ ಮುನ್ನವೇ ಪುನೀತ್‌ ರಾಜ್‌ಕುಮಾರ್‌ ಸಿಹಿ ತಿಂದಿದ್ದಾರೆ. ಅಭಿಮಾನಿಗಳಿಗೂ ಇದು ಸಿಹಿ ಸುದ್ದಿಯೇ.

ಪುನೀತ್‌ಗೆ ಇದು ಸಂತಸದ ಕಾಲ. ‘ಅಭಿ’ ಚಿತ್ರ ಏಪ್ರಿಲ್‌ 25ರ ಶುಕ್ರವಾರ ತೆರೆ ಕಾಣುತ್ತಿದೆ. ಇದರ ಜೊತೆಗೆ ಏಪ್ರಿಲ್‌ 24ರ ಗುರುವಾರ ಅಪ್ಪಾಜಿ ಹುಟ್ಟುಹಬ್ಬ. ಇವೆರಡಕ್ಕೂ ಮುನ್ನ ಹೆಣ್ಣು ಮಗುವಿನ ಅಪ್ಪನಾದ ಸಂತಸ. ಇದು ಸಂತಸ ಅರಳುವ ಸಮಯ. ಇಡೀ ರಾಜ್‌ ಕುಟುಂಬ ಹಬ್ಬದ ಸಡಗರದಲ್ಲಿದೆ.

ಏಪ್ರಿಲ್‌ 22ರ ಮಂಗಳವಾರ ಬೆಳಗ್ಗೆ 9 ಗಂಟೆಗೆ ಪುನೀತ್‌ ಪತ್ನಿ ಅಶ್ವಿನಿ ಬೆಂಗಳೂರಿನ ರಿಪಬ್ಲಿಕ್‌ ನರ್ಸಿಂಗ್‌ ಹೋಂನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ಮಗು ಆರೋಗ್ಯವಾಗಿದ್ದಾರೆ; ಪುನೀತ್‌ ಖುಷಿಯಲ್ಲಿ ತೇಲುತ್ತಿದ್ದಾರೆ.

ಇತ್ತ ‘ಅಭಿ’ ಬಗೆಗೆ ಗಾಂಧಿನಗರದಲ್ಲಿ ಒಳ್ಳೆಯ ಮಾತುಗಳು ಕೇಳಿಸುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...