»   » ‘ಮೊನಾಲಿಸ’ ಚೆಲುವೆ ಸದಾ ಸಂದರ್ಶನ

‘ಮೊನಾಲಿಸ’ ಚೆಲುವೆ ಸದಾ ಸಂದರ್ಶನ

Subscribe to Filmibeat Kannada
  • ಎಂ. ವಿನೋದಿನಿ
ಹಾಯ್‌ ಸದಾ ?

ನಮಸ್ಕಾರ.

ಕನ್ನಡ ಬರುತ್ತಾ ?

ಇಲ್ಲ . (ಇಂಗ್ಲಿಷ್‌ನಲ್ಲಿ ಮಾತು). ಕೆಲವು ಶಬ್ದಗಳು ಗೊತ್ತು .

ಕನ್ನಡ ಸಿನಿಮಾರಂಗದ ಬಗ್ಗೆ ನಿಮ್ಮ ಅಭಿಪ್ರಾಯ ?

ತುಂಬಾ ಅದ್ಭುತವಾಗಿದೆ. ಕನ್ನಡ ಚಿತ್ರರಂಗ ಇಷ್ಟೊಂದು ಮುಂದುವರಿದಿದೆ ಎಂದು ಈಮುನ್ನ ನನಗೆ ಗೊತ್ತೇ ಇರಲಿಲ್ಲ . ‘ಮೊನಾಲಿಸ’ದಲ್ಲಿ ನಟಿಸಿದ ನಂತರ ನನ್ನ ಅಭಿಪ್ರಾಯವೇ ಬದಲಾಯಿತು. ಕನ್ನಡ ಚಿತ್ರಗಳು ತೆಲುಗು ಚಿತ್ರಗಳಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲ . ಬಂಡವಾಳ, ಶ್ರಮ, ಪ್ರತಿಭೆ ಪ್ರತಿಯಾಂದರಲ್ಲೂ ‘ಮೊನಾಲಿಸ’ ಹೈಕ್ಲಾಸ್‌.

ಧ್ಯಾನ್‌ ಜೊತೆ ನಟಿಸುವಾಗ ಹೇಗನ್ನಿಸಿತು ?

ಒಳ್ಳೆಯ ಹುಡುಗ. ಚೆನ್ನಾಗಿ ಡ್ಯಾನ್ಸ್‌ ಮಾಡ್ತಾನೆ. ಸೆಟ್‌ನಲ್ಲಿ ಉತ್ಸ್ಸಾಹದಿಂದ ಇರ್ತಾನೆ. ಸಂಭಾಷಣೆಯನ್ನು ಪದೇಪದೇ ಓದಿಕೊಂಡು ಒಪ್ಪಿಸುತ್ತಾನೆ. ಆತನ ಜೊತೆ ಕೆಲಸ ಮಾಡಿದ್ದು ಸ್ಮರಣೀಯ ಅನುಭವ.

‘ಮೊನಾಲಿಸ’ ಚಿತ್ರದ ಬಗ್ಗೆ ಹೇಳಿ ?

‘ಮೊನಾಲಿಸ’ ಟೈಟಲ್‌ ಕೇಳಿಯೇ ಖುಷಿಯಾಯ್ತು . ಹೆಸರಿಗೆ ತಕ್ಕಂತೆ ಚಿತ್ರ ಕೂಡ ತುಂಬಾ ಚೆನ್ನಾಗಿ ಬರುತ್ತಿದೆ. ಕಥೆಯೇ ಹೊಸ ಥರದ್ದು . ಯುವ ಜನತೆ ಮಾತ್ರವಲ್ಲ , ಕುಟುಂಬದ ಮಂದಿಯೂ ಥಿಯೇಟರ್‌ಗೆ ಬರಬೇಕು, ಹಾಗಿದೆ ಚಿತ್ರ. ಇನ್ನು ಈ ಚಿತ್ರದಲ್ಲಿ ನನ್ನ ಡ್ರೆಸ್‌ ವಿಭಿನ್ನವಾಗಿರಬೇಕು ಅಂತ ನಾನು-ನಿರ್ದೇಶಕರು ವಿಶೇಷ ಎಚ್ಚರ ವಹಿಸಿದ್ದೇವೆ. ಮ್ಯೂಸಿಕ್‌ ಚೆನ್ನಾಗಿದೆ. ಈ ಚಿತ್ರ ಕನ್ನಡಿಗರಿಗೆ ಖಂಡಿತಾ ಇಷ್ಟವಾಗುತ್ತೆ . 100 ಪರ್ಸೆಂಟ್‌.

‘ಮೊನಾಲಿಸ’ ಚಿತ್ರದಲ್ಲಿ ನಿಮ್ಮದು ಯಾವ ಬಗೆಯ ಪಾತ್ರ ?

ಪಾತ್ರದ ಬಗ್ಗೆ ನಾನು ಹೇಳೊಲ್ಲ . ಕಥೆಯನ್ನೂ ಹೇಳೊಲ್ಲ . ನೀವು ಥಿಯೇಟರ್‌ಗೆ ಹೋಗಿಯೇ ತಿಳಿಯಬೇಕು. ಇಷ್ಟು ಮಾತ್ರ ಹೇಳ್ತೀನಿ- ಚಿತ್ರದಲ್ಲಿ ನಾನು ತುಂಬಾ ಮಾಡ್‌ ಹುಡುಗಿ. ಅಮೆರಿಕದಿಂದ ಭಾರತಕ್ಕೆ ಬಂದಿರ್ತೇನೆ. ಇಷ್ಟು ಸಾಕು.

ನಿರ್ದೇಶಕ ಇಂದ್ರಜಿತ್‌ ಬಗ್ಗೆ ಹೇಳಿ ?

ಏನು ಮಾಡಬೇಕು ? ಕಲಾವಿದರಿಂದ ಎಷ್ಟು ಕೆಲಸ ತೆಗೆಸಬೇಕು ಎನ್ನೋದು ಇಂದ್ರಜಿತ್‌ಗೆ ಗೊತ್ತಿದೆ. ಸೆಟ್‌ನಲ್ಲಿ ತುಂಬಾ ಹೇಳಿಕೊಡ್ತಾರೆ. ಉತ್ಸಾಹಿ ನಿರ್ದೇಶಕ. ಅವರ ಶ್ರಮ ‘ಮೊನಾಲಿಸ’ ಚಿತ್ರದ ಎಲ್ಲ ಫ್ರೇಂಗಳಲ್ಲೂ ಕಾಣುತ್ತದೆ.

ಸಂದರ್ಶನಕ್ಕೆ ಥ್ಯಾಂಕ್ಸ್‌ ಸದಾ....

ನಿಮಗೂ ಥ್ಯಾಂಕ್ಸ್‌ . ಕನ್ನಡಿಗರು ‘ಮೊನಾಲಿಸ’ ಚಿತ್ರವನ್ನು ಒಪ್ಪಿಕೊಳ್ಳುವರೆಂದು ನಂಬಿದ್ದೇನೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada