»   » ‘ಇಮೇಜಿನ್‌ಏಷ್ಯಾ’ : ಇಂಗ್ಲೆಂಡ್‌ನಲ್ಲಿ ತುಂಬಿಕೊಳ್ಳುತ್ತಿರುವ ಬಾಲಿವುಡ್‌ ಘಮ!

‘ಇಮೇಜಿನ್‌ಏಷ್ಯಾ’ : ಇಂಗ್ಲೆಂಡ್‌ನಲ್ಲಿ ತುಂಬಿಕೊಳ್ಳುತ್ತಿರುವ ಬಾಲಿವುಡ್‌ ಘಮ!

Posted By: Staff
Subscribe to Filmibeat Kannada

ಲಂಡನ್‌: ಎಂಟು ತಿಂಗಳ ದಕ್ಷಿಣ ಏಷ್ಯ ಚಲನ ಚಿತ್ರ ಮೇಳದ ಸಡಗರ ಇಂಗ್ಲೆಂಡ್‌ನಲ್ಲಿ ವ್ಯಾಪಕವಾಗುತ್ತಿದ್ದು , ಗುರುವಾರದಿಂದ (ಏ.25) ಪ್ರಾರಂಭವಾಗುವ 'ಇಮೇಜಿನ್‌ಏಷ್ಯಾ" (ImagineAsia) ಚಿತ್ರೋತ್ಸವದಲ್ಲಿ ಭಾರತದ ಸಿನಿಮಾಗಳು ಚಿತ್ರ ರಸಿಕರಿಗೆ ಆಕರ್ಷಣೆಯ ಕೇಂದ್ರವಾಗಲಿವೆ.

ಮದರ್‌ ಇಂಡಿಯಾ, ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸೇರಿದಂತೆ 300 ಕ್ಕೂ ಹೆಚ್ಚು ಬಾಕ್ಸಾಫೀಸ್‌ ಹಿಟ್‌ ಸಿನಿಮಾಗಳು ವಿವಿಧ ನಗರಗಳ 50 ಪ್ರಮುಖ ಕಮ್ಯುನಿಟಿ ಸೆಂಟರ್‌, ಮಲ್ಟಿಫ್ಲೆಕ್ಸಸ್‌, ಮ್ಯೂಸಿಯಂ ಹಾಗೂ ಲೈಬ್ರರಿಗಳಲ್ಲಿ ಪ್ರದರ್ಶನಗೊಳ್ಳಲಿವೆ. ಆಸ್ಕರ್‌ ಪ್ರಶಸ್ತಿಯ ಅಂತಿಮ ಕಣ ಪ್ರವೇಶಿಸಿದ್ದ ಲಗಾನ್‌ ಹಾಗೂ ಜನಪ್ರಿಯ ಚಿತ್ರಗಳಾದ ಕಭಿ ಖುಷಿ ಕಭಿ ಗಮ್‌, ಬೀವಿ ನಂ.1 ಚಿತ್ರಗಳು ಕೂಡ ಚಿತ್ರೋತ್ಸವದ ಆಕರ್ಷಣೆಯಾಗಿವೆ.

ಭಾರತ ಹಾಗೂ ಪಾಕಿಸ್ತಾನ ಪ್ರೇಕ್ಷಕರು ಮಾತ್ರವಲ್ಲದೆ, ಇಂಗ್ಲೆಂಡ್‌ನ ಬಿಳಿಯ ನಾಗರೀಕರನ್ನು ಕೂಡ ಭಾರತದ ಹಿಂದಿ ಚಿತ್ರಗಳು ಭಾರೀ ಪ್ರಮಾಣದಲ್ಲಿ ಸೆಳೆಯುವ ನಿರೀಕ್ಷೆಯಿದೆ. ಇತ್ತೀಚಿನ ಬ್ರಿಟೀಷ್‌- ಏಷ್ಯನ್‌ ಚಿತ್ರಗಳಿಗೂ ಚಿತ್ರೋತ್ಸವ ವೇದಿಕೆಯಾಗಲಿದೆ. ಅಸೀಫ್‌ ಕಪಾಡಿಯಾ ಅವರ ಪ್ರಶಸ್ತಿ ವಿಜೇತ ಚಿತ್ರವಾದ 'ದಿ ವಾರಿಯರ್‌", ಮೀರಾ ಸ್ಯಾಲ್‌ರ 'ಅನಿತಾ ಅಂಡ್‌ ಮಿ", ಜಿಮ್ಮಿ ಮಿಸ್ಟ್ರಿ ಅವರ 'ದಿ ಗುರು", ಗುರೀಂದರ್‌ ಛಡ್ಹಾ ಅವರ 'ಭಾಜಿ ಆನ್‌ ದಿ ಬೀಚ್‌" ಹಾಗೂ 'ಬೆಂಡ್‌ ಇಟ್‌ ಲೈಕ್‌ ಬೆಕ್‌ಹಂ" ಚಿತ್ರಗಳ ಚಿತ್ರ ರಸಿಕರ ವಿಶೇಷ ಕುತೂಹಲಕ್ಕೆ ಕಾರಣವಾಗಿವೆ.

ಶ್ರೀಲಂಕಾ ಹಾಗೂ ಬಾಂಗ್ಲಾ ದೇಶದ ಕೆಲವು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದ್ದರೂ ಬಾಲಿವುಡ್‌ ಚಿತ್ರಗಳಿಗೇ ಚಿತ್ರೋತ್ಸವದಲ್ಲಿ ಮೊದಲ ಮಣೆ ಎನ್ನುತ್ತಾರೆ ಉತ್ಸವದ ಸಂಯೋಜಕ ಹಾಗೂ ಬ್ರಿಟೀಷ್‌ ಫಿಲಂ ಇನ್‌ಸ್ಟಿಟ್ಯೂಟ್‌ನ ಕ್ಯಾರಿ ಸಹ್ವಾನೆ. ಇಂಗ್ಲೆಂಡ್‌ನಲ್ಲಿ ದಕ್ಷಿಣ ಏಷ್ಯಾ ಸಿನಿಮಾಗಳ ಘಮಲನ್ನು ತುಂಬುವಲ್ಲಿ ಈ ಉತ್ಸವ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ಸಹ್ವಾನೆ ಅವರದ್ದು.(ಪಿಟಿಐ)

English summary
Festival of Indian films in the UK
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada