»   » ರಾಷ್ಟ್ರಾದ್ಯಂತ ‘ಜೋ ಬೋಲೆ...’ ಪ್ರದರ್ಶನ ಬಂದ್‌

ರಾಷ್ಟ್ರಾದ್ಯಂತ ‘ಜೋ ಬೋಲೆ...’ ಪ್ರದರ್ಶನ ಬಂದ್‌

Posted By:
Subscribe to Filmibeat Kannada

ನವದೆಹಲಿ : ಸನ್ನಿಡಿಯೋಲ್‌ ಅಭಿನಯದ ವಿವಾದಾತ್ಮಕ ಚಲನಚಿತ್ರ‘ಜೋ ಬೋಲೆ ಸೋ ನಿಹಾಲ್‌’ ಪ್ರದರ್ಶನವನ್ನು ಚೆನ್ನೈನಲ್ಲಿ ಸೋಮವಾರ ನಿರ್ಬಂಧಿಸಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

ಚೆನ್ನೈನ ಮೆಲೋಡಿ ಚಿತ್ರಮಂದಿರದಲ್ಲಿ ಶುಕ್ರವಾರದಿಂದ ಚಿತ್ರಪ್ರದರ್ಶನಗೊಳ್ಳುತ್ತಿತ್ತು. ದೆಹಲಿಯಲ್ಲಿ ನಡೆದ ಗದ್ದಲದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವನ್ನು ನಿಲ್ಲಿಸಿಲಾಗಿದೆ.

ಅಹಿತಕರ ಘಟನೆಗಳನ್ನು ತಪ್ಪಿಸಲು ಕರ್ನಾಟಕದಲ್ಲಿಯೂ ಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ಚಿತ್ರಮಂದಿರಗಳಿಗೆ ಸೂಚಿಸಿರುವಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ಮುಂಬೈ ಮತ್ತಿರ ಪ್ರದೇಶಗಳಲ್ಲಿ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ.

ವಿವಾದ : ಜೋ ಬೋಲೆ ಸೋ ನಿಹಾಲ್‌ ಸತ್‌ ಶ್ರೀ ಅಕಾಲ್‌.. . ಎಂಬುದು ಸಿಖ್‌ರ ಪವಿತ್ರ ಘೋಷವಾಕ್ಯ. ಈ ವಾಕ್ಯವನ್ನು ಚಿತ್ರ ಶೀರ್ಷಿಕೆಯಲ್ಲಿ ಬಳಸಿಕೊಳ್ಳುವ ಮೂಲಕ ನಮ್ಮ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ಸಿಖ್‌ ಸಮುದಾಯ ಅತೃಪ್ತಿ ವ್ಯಕ್ತಪಡಿಸಿತ್ತು .

ಈ ಬೆನ್ನಲ್ಲಿಯೇ ಚಿತ್ರಪ್ರದರ್ಶಗೊಳ್ಳುತ್ತಿದ್ದ ನವದೆಹಲಿಯ ಲಿಬರ್ಟಿ ಮತ್ತು ಸತ್ಯಂ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರದಲ್ಲಿ ಭಾನುವಾರ ಸಂಭವಿಸಿದ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಬಲಿಯಾಗಿದ್ದು, 50ಮಂದಿ ಗಾಯಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada