»   » ‘ದುನಿಯಾ’ ನಂತರ ವಿಜಯ್‌ ‘ಯುಗ’ ಶುರು!

‘ದುನಿಯಾ’ ನಂತರ ವಿಜಯ್‌ ‘ಯುಗ’ ಶುರು!

Posted By:
Subscribe to Filmibeat Kannada


ವಿಜಯ್‌ ಮುಂದೆ ಸಾಕಷ್ಟು ಅವಕಾಶಗಳಿವೆ. ಎಲ್ಲವನ್ನೂ ಪಕ್ಕಕ್ಕಿಟ್ಟು ಅವರು ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರ ‘ಯುಗ’. ಈ ಚಿತ್ರಕ್ಕೆ ಕತೆಯೇ ಜೀವಾಳವಂತೆ. ಹೀಗಾಗಿ ಕತೆಯ ಒಂದು ಎಳೆಯನ್ನೂ ಸಹಾ ಚಿತ್ರತಂಡ ಬಿಚ್ಚಿಡಲಿಲ್ಲ!

ಹಲವು ಕೇಂದ್ರಗಳಲ್ಲಿ ‘ಮುಂಗಾರುಮಳೆ’ ಚಿತ್ರಕ್ಕೆ ಸಾಟಿಯಾಗಿ ಹಣಕೊಳ್ಳೆಹೊಡೆಯುತ್ತಿರುವ ಮತ್ತೊಂದು ಚಲನಚಿತ್ರ ‘ದುನಿಯಾ’. ಇದರ ನಾಯಕ ವಿಜಯ್‌ ಕೈತುಂಬಾ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಮಧ್ಯೆ ವಿಜಯ್‌ ‘ಯುಗ’ ಎಂಬ ಹೊಸ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ದುನಿಯಾ’ ಚಿತ್ರದಲ್ಲಿ ನಿರ್ದೇಶಕ ಸೂರಿ ಅವರಿಗೆ ಸಹನಿರ್ದೇಶಕರಾಗಿ ಕೆಲಸಮಾಡಿದ್ದ ಚಂದ್ರ, ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕೈಹಾಕಿದ್ದಾರೆ.

ಅಂದಹಾಗೆ, ಒಂದರ್ಥದಲ್ಲಿ ‘ಯುಗ’ ಅಸೋಸಿಯೇಟ್‌ಗಳ ಚಿತ್ರ. ‘ದುನಿಯಾ’ ಚಿತ್ರದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್‌ ಅವರಿಗೆ ಅಸೋಸಿಯೇಟ್‌ ಆಗಿ ದುಡಿದಿದ್ದ ಅರ್ಜುನ್‌, ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ.

ಉದಯ ಹಾಗೂ ಉದಯ2 ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ಕಾವ್ಯಾ, ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೈಕೋ ನಾಗರಾಜ್‌, ಸುಧಾ ಬೆಳವಾಡಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಚಂದ್ರ ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ, ಕಥೆ ಬಗ್ಗೆ ಏನೇನೂ ಹೇಳಲಿಲ್ಲ. ಆದರೆ ಚಿತ್ರೀಕರಣ ಹಾಗೂ ಚಿತ್ರದ ಸಂಗೀತದ ಬಗ್ಗೆ ಮಾತ್ರ ವಿವರ ನೀಡಿದರು. ಚಿತ್ರದ ನಾಯಕ ವಿಜಯ್‌ ನಾಲ್ಕೇ ಮಾತುಗಳನ್ನಾಡಿ, ತಾವು ಈ ಚಿತ್ರದಲ್ಲಿ ಹಲವು ಕಠಿಣ ಸಾಹಸ ದೃಶ್ಯಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಕಥೆಯೇ ಚಿತ್ರದ ಜೀವಾಳ ಎಂಬುದನ್ನು ಹೇಳಲು ಮರೆಯಲಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada